Wednesday, August 27, 2025
Google search engine
HomeUncategorizedನ್ಯಾ.ಸಂದೀಪ್ ಸಾಲಿಯಾನ, ಪ್ರೊ.ಕೆ.ಆರ್.ರವಿಕಿರಣ್ ಸೇರಿ 15 ಜನರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ನ್ಯಾ.ಸಂದೀಪ್ ಸಾಲಿಯಾನ, ಪ್ರೊ.ಕೆ.ಆರ್.ರವಿಕಿರಣ್ ಸೇರಿ 15 ಜನರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ದೊಡಬಳ್ಳಾಪುರ: ಬೆಂ.ಗ್ರಾ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಸಂದೀಪ್ ಸಾಲಿಯಾನ, ಹಿರಿಯ ಪತ್ರಕರ್ತ ಹಾಗೂ ದೇವರಾಜ ಅರಸ್ ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದ ನಿಕಟಪೂರ್ವ ಪ್ರಾಂಶುಪಾಲ ಪ್ರೊ.ಕೆ.ಆರ್.ರವಿಕಿರಣ್ ಸೇರಿದಂತೆ ವಿವಿಧ ಕ್ಷೇತ್ರಗಳ 15 ಸಾಧಕರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಿದ್ದು ಇಂದು ಪ್ರಶಸ್ತಿ ಪ್ರಧಾನ ನಡೆಯಲಿದೆ.

ನ್ಯಾಯಾಂಗ ಕ್ಷೇತ್ರದಲ್ಲಿ ಸಂದೀಪ್ ಸಾಲಿಯಾನ, ಸಾಹಿತ್ಯ-ಪತ್ರಿಕೋದ್ಯಮ ಕ್ಷೇತ್ರದಲ್ಲಿ ಪ್ರೊ.ಕೆ.ಆರ್.ರವಿಕಿರಣ್(ದೊಡ್ಡಬಳ್ಳಾಪುರ), ರಂಗಭೂಮಿ ಕ್ಷೇತ್ರದಲ್ಲಿ ರಂಗನಾಥರಾವ್-ದೇವನಹಳ್ಳಿ, ಆರ್,ವಿ.ಮಂಜುನಾಥ್-ದೊಡ್ಡಬಳ್ಳಾಪುರ, ಟಿ.ಕೃಷ್ಣಪ್ಪ-ನೆಲಮಂಗಲ, ವೆಂಕಟಶಾಮಯ್ಯ-ನೆಲಮಂಗಲ, ಲಕ್ಷ್ಮೀನಾರಾಯಣ-ಹೊಸಕೋಟೆ, ಜಾನಪದ ಕ್ಷೇತ್ರದಲ್ಲಿ ಮುನಿಲಕ್ಷ್ಮಮ್ಮ-ನೆಲಮಂಗಲ, ಅಶ್ವತ್ಥಗೌಡ-ದೇವನಹಳ್ಳಿ, ರಾಜಶೇಖರ್-ದೇವನಹಳ್ಳಿ, ಶಿಕ್ಷಣ ಕ್ಷೇತ್ರದಲ್ಲಿ ಡಾ.ಷಫಿ ಅಹ್ಮದ್-ದೇವನಹಳ್ಳಿ, ಡೋಲುವಾದಕ ಎಂ.ವೆಂಕಟರಾಜು-ದೊಡ್ಡಬಳ್ಳಾಪುರ, ಕ್ರೀಡಾ ಕ್ಷೇತ್ರದಲ್ಲಿ ಪವನ್‌ ಕುಮಾರ್-ದೊಡ್ಡಬಳ್ಳಾಪುರ, ಸಮಾಜ ಸೇವಾ ಕ್ಷೇತ್ರದಲ್ಲಿ ಬಿ.ಕೆ.ನಾರಾಯಣಸ್ವಾಮಿ-ದೇವನಹಳ್ಳಿ, ಕೃಷಿ ಕ್ಷೇತ್ರದಲ್ಲಿ ಮರವೆ ನಾರಾಯಣಪ್ಪ-ವಿಜಯಪುರ ಅವರನ್ನು ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ ಎಂದು 68ನೇ ಕನ್ನಡ ರಾಜ್ಯೋತ್ಸವ ಜಿಲ್ಲಾ ಮಟ್ಟದ ಸಾಧಕರ ಆಯ್ಕೆ ಸಮಿತಿ ಅಧ್ಯಕ್ಷ, ಉಪವಿಭಾಗಾಧಿಕಾರಿ ಶ್ರೀನಿವಾಸ್ ತಿಳಿಸಿದ್ದಾರೆ.

ಇದನ್ನೂ ಓದಿ: ಖತರ್ನಾಕ್​ ಅಡಿಕೆ ಕಳ್ಳರ ಬಂಧನ!

ಪುರಸ್ಕೃತರಿಗೆ ಇಂದು ದೇವನಹಳ್ಳಿಯ ಡಾ.ಬಿ.ಆರ್.ಅಂಬೇಡ್ಕರ್ ಮೈದಾನದಲ್ಲಿ ನಡೆಯುವ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಅವರು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments