Monday, December 23, 2024

ಖತರ್ನಾಕ್​ ಅಡಿಕೆ ಕಳ್ಳರ ಬಂಧನ!

ಶಿವಮೊಗ್ಗ: ಗೋದಾಮಿನಿಂದ ಅಡಿಕೆ ಕಳ್ಳತನ ಮಾಡಿದ್ದ ಮೂವರು ಕಳ್ಳರನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೊಪ್ಪಿಸಿರುವ ಘಟನೆ ಜಿಲ್ಲೆಯ ಹೊಸನಗರದಲ್ಲಿ ನಡೆದಿದೆ.

ಹೊಸನಗರ ಮಾವಿನಕೊಪ್ಪದ ರವಿರಾಜ (32), ರಾಜೇಶ (40), ಹೊಸನಗರ ಪಟ್ಟಣದ ನಾಗರಾಜ (31) ಬಂಧಿತ ಆರೋಪಿಗಳು. ಗೋದಾಮಿನಿಂದ 2. ಕ್ವಿಂಟಾಲ್​ 72 ಕೆ.ಜಿ ಅಡಿಕೆ ಕದ್ದೊಯ್ದಿದ್ದರು.

ಇದನ್ನೂ ಓದಿ: ಅತ್ಯಾಚಾರಕ್ಕೆ ವಿರೋಧ; ತಾಯಿಯನ್ನೇ ಕೊಂದ ಪಾಪಿ ಮಗ!

ಹೊಸನಗರ ಪಟ್ಟಣದ ಸುಮೇಧಾ ವಿವಿದ್ಧೋದ್ದೇಶ ಸೌಹಾರ್ದ ಸಹಕಾರ ಸಂಘದ ಗೋದಾಮಿನಲ್ಲಿಟ್ಟಿದ್ದ 1.33 ಲಕ್ಷ ಮೌಲ್ಯದ 2. ಕ್ವಿಂಟಲ್​ 72 ಕೆ.ಜಿ ಅಡಿಕೆ ಮೂಟೆಗಳನ್ನು ಸೆ.21ರ ರಾತ್ರಿ ಮೂವರು ಕಳ್ಳರು ಸೇರಿ ಕಳ್ಳತನ ಮಾಡಿದ್ದರು. ಘಟನೆ ಸಂಬಂಧ ಪೊಲೀಸ್​ ಠಾಣೆಗೆ ದೂರು ನೀಡಲಾಗಿತ್ತು.

ಕಳ್ಳರನ್ನು ಬಂಧಿಸಿದ ಪೊಲೀಸರು ಕೃತ್ಯಕ್ಕೆ ಬಳಸಿದ್ದ 1 ಬೈಕ್​ ಮತ್ತು 2 ಕ್ವಿಂಟಲ್​ 72 ಕೆಜಿ ಅಡಿಕೆ ವಶಕ್ಕೆ ಪಡೆದಿದ್ದಾರೆ.

RELATED ARTICLES

Related Articles

TRENDING ARTICLES