Wednesday, December 25, 2024

30 ಶಾಸಕರೊಂದಿಗೆ ಸತೀಶ್ ಜಾರಕಿಹೋಳಿ​ ಶಕ್ತಿ ಪ್ರದರ್ಶನಕ್ಕೆ ಸಿದ್ಧತೆ!

ಬೆಂಗಳೂರು: ಎರಡನೇ ಹಂತದ ಶಕ್ತಿ ಪ್ರದರ್ಶನಕ್ಕೆ ಸಚಿವ ಸತೀಶ್​​ ಜಾರಕಿಹೊಳಿ ವೇದಿಕೆ ರೆಡಿ ಮಾಡುತ್ತಿದ್ದು 30 ಶಾಸಕರ ದಂಡು ಕಟ್ಟಿಕೊಂಡು ವಿದೇಶ ಪ್ರವಾಸಕ್ಕೆ ಹೊರಡಲು ಸಿದ್ದರಾಗಿದ್ದಾರೆ.

ಈ ಮೊದಲು 17 ಶಾಸಕರು ಜೊತೆಗಿದ್ದಾರೆಂದು ಡಿಸಿಎಂ ಡಿ.ಕೆ.ಶಿವಕುಮಾರ್​ ಗೆ ಹಾಗೂ ಹೈಕಮಾಂಡ್​ಗೆ ಸಂದೇಶ ರವಾನಿಸಿದ್ದರು. ಇದೀಗ ದೊಡ್ಡ ಮಟ್ಟದ ಮೆಸೇಜ್ ಪಾಸ್ ಮಾಡಲು ದೀಪಾವಳಿ ಬಳಿಕ ಪ್ರವಾಸಕ್ಕೆ ಬೆಳಗಾವಿ ಸಾಹುಕಾರ್​ ಮುಂದಾಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಕರಾವಳಿಯ ವಿವಿಧೆಡೆ IT ರೇಡ್​​​!

ಸತೀಶ್​​ ಜೊತೆ ಕೇವಲ ಪರಿಶಿಷ್ಟ ಜಾತಿ ಶಾಸಕರು ಇದ್ದಾರೆ ಎಂದುಕೊಂಡವರಿಗೆ ಬಿಗ್​ ಶಾಕ್​ ಎದುರಾಗಿದ್ದು.  ದುಬೈ ಪ್ರವಾಸದಲ್ಲಿ ಪರಿಶಿಷ್ಟ ಜಾತಿ ಶಾಸಕರ ಜೊತೆಗೆ ಲಿಂಗಾಯತ ಹಾಗೂ ಒಬಿಸಿ ಶಾಸಕರು ಜೊತೆಯಾಗುತ್ತಿದ್ದಾರೆ.

ಈಗಾಗಲೇ ಸತೀಶ್ ಸೂಚನೆ ಮೇರೆಗೆ ಟ್ರಾವೆಲ್ಸ್ ಕಂಪನಿಯೊಂದು ಶಾಸಕರ ಜೊತೆ ಸಂಪರ್ಕದಲ್ಲಿದ್ದು. ಪಾಸ್​​​ಪೋರ್ಟ್ ಇಲ್ಲದವರಿಗೆ ಪಾಸ್​​ಪೋರ್ಟ್ ವ್ಯವಸ್ಥೆಯೂ ಮಾಡಲಾಗುತ್ತಿದೆ. ಶಾಸಕರ ದುಬೈ ಪ್ರವಾಸಕ್ಕೂ ಮುನ್ನ ಸೋತ ಅಭ್ಯರ್ಥಿಗಳು ಹಾಗೂ ಕೆಲ ಮಾಜಿ ಶಾಸಕರನ್ನು ವಿದೇಶಕ್ಕೆ ಕಳಿಸಿ ಕೊಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

RELATED ARTICLES

Related Articles

TRENDING ARTICLES