Monday, December 23, 2024

ಹಳೆ ದ್ವೇಷ: ಸಿನಿಮೀಯ ಸ್ಟೈಲ್​ನಲ್ಲಿ ಕಾರು ಹತ್ತಿಸಿ ಮರ್ಡರ್​​!

ಬೆಂಗಳೂರು: ಬೈಕ್​ ಗೆ ಕಾರಿನಿಂದ ಗುದ್ದಿ ಸಿನಿಮೀಯ ಶೈಲಿಯಲ್ಲಿ ವ್ಯಕ್ತಿಯೊಬ್ಬನ್ನು ಕೊಲೆ ಮಾಡಿರುವ ಘಟನೆ ನಗರದ ಪುಲಿಕೇಶಿ ನಗರದಲ್ಲಿ ನಡೆದಿದೆ.

ಇದನ್ನೂ ಓದಿ: ಮರಾಠ ಮೀಸಲಾತಿ ಕಿಚ್ಚು: ಕರ್ನಾಟಕ-ಮಹಾರಾಷ್ಟ್ರ ಮಧ್ಯೆ‌ ಬಸ್​​ ಸಂಚಾರ ಸ್ಥಗಿತ!

ಹಸ್ಗರ್​ ಭೀಕರವಾಗಿ ಕೊಲೆಯಾದ ವ್ಯಕ್ತಿ, ಉದ್ದೇಶಪೂರ್ವಕವಾಗಿ ಕಾರು ಹರಿಸಿ ಅಸ್ಗರ್ ಎಂಬಾತನನ್ನು ಕೊಲೆ ಮಾಡಿದ್ದಾರೆ. ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಕ್ಟೋಬರ್​ 20 ರಂದು ಬೈಕ್​​​ಗೆ ಗುದ್ದಿ ಕೆಳಗೆ ಬೀಳಿಸಿ ಬಳಿಕ ವ್ಯಕ್ತಿಯನ್ನು ಹಿಂಬಾಲಿಸಿ ಕಾರು ಹರಿಸಿ ಕೊಲೆ ಮಾಡಲಾಗಿದೆ. ಈ ವೇಳೆ ತಪ್ಪಿಸಿಕೊಳ್ಳಲು ಓಡಿದರು ಬಿಡದೆ ಅಸ್ಗರ್​ನನ್ನು ಕೊಲೆ ಮಾಡಲಾಗಿದೆ.

ಘಟನೆ ಹಿನ್ನೆಲೆ ಆರೋಪಿ ಅಮ್ರಿನ್ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದ್ದು ಜೆ.ಸಿ.ನಗರ ಪೊಲೀಸ್​​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES