Wednesday, January 22, 2025

ಪೊಲೀಸ್​​​​​​ ಮುಂದೆ ಡ್ಯಾಗರ್​​ ಹಿಡಿದು ಪುಡಿರೌಡಿ ಹುಚ್ಚಾಟ!

ತುಮಕೂರು: ಪುಡಿರೌಡಿಯೋರ್ವ ಕೈಯಲ್ಲಿ ಡ್ಯಾಗರ್​ ಹಿಡಿದು ಮಹಿಳಾ ಪೊಲೀಸ್ ಸಿಬ್ಬಂದಿ ಮುಂದೆಯೇ ಹುಚ್ಚಾಟವಾಡಿರುವ ಘಟನೆ ತುಮಕೂರಿನ ಖಾಸಗಿ ಬಸ್​ ನಿಲ್ದಾಣದಲ್ಲಿ ನಡೆದಿದೆ.

ಮೋಜಾ ಅಲಿಯಾಸ್​​ ಮಧು ಪುಂಡಾಟ ಮೆರೆದ ಆರೋಪಿ, ಸೋಮವಾರ ಸಂಜೆ ತುಮಕೂರಿನ ಅಶೋಕ ರಸ್ತೆಯಲ್ಲಿರುವ ಖಾಸಗಿ ಬಸ್​ ನಿಲ್ದಾಣದ ಬಳಿ ಮಧು ಪುಂಟಾಟ ಮೆರೆದಿದ್ದಾನೆ.

ಇದನ್ನೂ ಓದಿ: ಬೀದಿ ನಾಯಿಗಳ ದಾಳಿಗೆ ವೃದ್ದ ಸ್ಥಳದಲ್ಲೇ ಸಾವು!

ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಮೋಜಾ ಅಲಿಯಾಸ್​​ ಮಧು ಇತ್ತೀಚೆಗಷ್ಟೇ ಜೈಲಿನಿಂದ ಜಾಮೀನು ಮೇಲೆ ಹೊರಬಂದಿದ್ದ. ಸೋಮವಾರ ರಾತ್ರಿ ತುಮಕೂರಿನ ಅಶೋಕ ರಸ್ತೆಯಲ್ಲಿನ ಖಾಸಗಿ ಬಸ್​ ನಿಲ್ದಾಣದ ಬಳಿ ಕೈಯಲ್ಲಿ ಡ್ಯಾಗರ್ ಹಿಡಿದು, ಸಾರ್ವಜನಿಕರಿಗೆ ಬೆದರಿಸಿ ಮೊಬೈಲ್ ದೋಚುತ್ತಿದ್ದ.

ಈ ಬಗ್ಗೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನು ಹಿಡಿಯಲು ಮುಂದಾದ ವೇಳೆ ಮಹಿಳಾ ಪೊಲೀಸ್​ ಮಂಗಳಮ್ಮ ಅವರ ಮುಂದೆ ಸುಮಾರು ಅರ್ಧ ಗಂಟೆಗಳ ಕಾಲ ಹುಚ್ಚಾಟ ಮಾಡಿದ್ದಾನೆ, ಬಳಿಕ ಆರೋಪಿ ಮಧುನನ್ನು ಬಂಧಿಸಿ ಆತನ ವಿರುದ್ಧ ತುಮಕೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

RELATED ARTICLES

Related Articles

TRENDING ARTICLES