ಬೆಂಗಳೂರು : ಕೇಂದ್ರ ಸರ್ಕಾರ ಯಾರ ಪ್ರಭಾವಕ್ಕೂ ಒಳಗಾಗದಿದ್ರೆ ಫೋನ್ ಹ್ಯಾಕಿಂಗ್ ಪ್ರಯತ್ನ ಯಾಕೆ? ನಮ್ಮ ಫೋನ್‌ಗಳನ್ನು ಎಷ್ಟು ಬೇಕಾದರೂ ಟ್ಯಾಪ್ ಮಾಡಬಹುದು, ಸರ್ಕಾರದ ಪ್ರಯತ್ನಗಳಿಗೆ ನಾವು ಹೆದರುವುದಿಲ್ಲ ಎಂದು ಸಂಸದ ರಾಹುಲ್ ಗಾಂಧಿ ತಿರುಗೇಟು ನೀಡಿದರು.
ಕೇಂದ್ರ ಸರ್ಕಾರದಿಂದ ವಿಪಕ್ಷ ನಾಯಕರ ಫೋನ್ ಕದ್ದಾಲಿಕೆ ಆರೋಪದ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸರ್ಕಾರದ ಇಂತಹ ನಡೆ ವಿರುದ್ಧ ಬಹಳ ಕಡಿಮೆ ಜನರು ಹೋರಾಡುತ್ತಿದ್ದಾರೆ. ನೀವು ಎಷ್ಟು ಬೇಕಾದರೂ ಟ್ಯಾಪಿಂಗ್ ಮಾಡಬಹುದು, ನಾನು ಹೆದರುವುದಿಲ್ಲ, ಬೇಕಿದ್ದರೆ ನಾನೇ ನಿಮಗೆ ನನ್ನ ಫೋನ್ ಕೊಡುತ್ತೇನೆ ಎಂದು ತಿರುಗೇಟು ನೀಡಿದರು.
ಇಲ್ಲಿ ಗಿಣಿ ಕೊರಳನ್ನು ಹಿಡಿದಿದೆ, ಇನ್ನೊಂದು ಬದಿಯಲ್ಲಿ ಕ್ರೂರ ರಾಜನು ಸಂಕಟಪಡುತ್ತಾನೆ. ನಿಮಗೆ ಬೇಕಾದಷ್ಟು ಬೇಹುಗಾರಿಕೆ ಮಾಡಿ, ನಮಗೆ ಭಯವಿಲ್ಲ. ನಾವು ಹೋರಾಡುತ್ತೇವೆ. ದೇಶದಲ್ಲಿ ನಂ.1 ಅದಾನಿ, ನಂ.2 ಪ್ರಧಾನಿ ನರೇಂದ್ರ ಮೋದಿ ಮತ್ತು ನಂ.3 ಅಮಿತ್ ಶಾ ಎಂದು ಶ್ರೇಣಿ ಮಾಡಲಾಗಿದೆ ಎಂದು ಆರೋಪಿಸಿದರು.
इधर तोते की गर्दन पकड़ी, उधर क्रूर राजा तड़प रहा है!
जितनी जासूसी करनी है कर लो – हम डरने वाले नहीं, लड़ने वाले हैं। pic.twitter.com/BNoSHy2eFp
— Rahul Gandhi (@RahulGandhi) October 31, 2023