Monday, December 23, 2024

ಬೆಂಗಳೂರಿನ ಅಪಾರ್ಟ್ಮೆಂಟ್ ನಲ್ಲಿ ಚಿರತೆ ಓಡಾಟ: ಚೀತಾ ಕಾರ್ಯಾಚರಣೆಗೆ ವೇಗ!

ಬೆಂಗಳೂರು: ಬೆಂಗಳೂರಿನ ಬೊಮ್ಮನಹಳ್ಳಿ ಸಿಂಗಸಂದ್ರಲ್ಲಿರುವ ಎಸಿಎಸ್ ಲೇಔಟ್ ಅಪಾರ್ಟ್ಮೆಂಟ್​​​ವೊಂದರ ಸೆಲ್ಲರ್ ಮತ್ತು ಮೊದಲ ಮಹಡಿಯಲ್ಲಿ ಓಡಾಡಿದ್ದು ಇಲ್ಲಿನ ಜನರಿಗೆ ಆಂತಕ ಉಂಟುಮಾಡಿದೆ.

ಅಕ್ಟೋಬರ್ 28ರ ಬೆಳಗಿನ ಜಾವ ಚಿರತೆಯೊಂದು ಓಡಾಡಿದ ದೃಶ್ಯ ನಿವಾಸಿಗಳಲ್ಲಿ ಭಯವನ್ನುಂಟು ಮಾಡಿದೆ. ವಿಷಯ ತಿಳಿದು ಚೀತಾ ಆಪರೇಷನ್​​​ಗಿಳಿದಿರುವ ಅರಣ್ಯ ಇಲಾಖೆ ಡ್ರೋಣ್ ಮೂಲಕ ಚಿರತೆ ಪತ್ತೆ ಮಾಡುವ ಕೆಲಸ ಆರಂಭಿಸಿದ್ದಾರೆ.

ಇದನ್ನು ಓದಿ: ಸಾರಿಗೆ ನೌಕರರಿಗೆ ಸಿಹಿಸುದ್ದಿ ಕೊಟ್ಟ KSRTC!

ಸಿಂಗಸಂದ್ರದಲ್ಲಿರುವ ಆಪಾರ್ಟ್ ಮೆಂಟ್​​ಗಳ ನಡುವೆ ಸುಮಾರು ನಾಲ್ಕೂವರೆ ಎಕರೆಯಷ್ಟು ಅರಣ್ಯ ಪ್ರದೇಶವಿದ್ದು ಚಿರತೆ ಅಲ್ಲಿಂದಲೇ ಬಂದಿರಬಹುದು ಅಥವಾ ಅಲ್ಲೇ ಅಡಗಿರಬಹದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಇದರ ಜೊತೆಗೆ ಎಇಸಿಎಪ್ ಖಾಲಿ ಬಡಾವಣೆಯಲ್ಲಿ ನಾಲ್ಕು ಬೋನ್​ಗಳನ್ನ ಅಳವಡಿಸಲಾಗಿದೆ. ಬೋನ್​​ನಲ್ಲಿ ಜೀವಂತ ಕೋಳಿಗಳನ್ನಿಟ್ಟು ಕಾರ್ಯಾಚರಣೆ ನಡೆಸಲಾಗುತ್ತಿದೆ. ಡಿಎಫ್​ಓ ರವೀಂದ್ರ ಹಾಗೂ ಆರ್​ಎಫ್​​ಓ ಶಿವರಾತ್ರೇಶ್ವರ ನೇತೃತ್ವದ ತಂಡದಿಂದ ಈ ಕಾರ್ಯಾಚರಣೆ ನಡೆಯುತ್ತಿದೆ.

RELATED ARTICLES

Related Articles

TRENDING ARTICLES