ನವದೆಹಲಿ : ಕಾವೇರಿ ನೀರು ವಿಚಾರ ಸಂಬಂಧಿಸಿದಂತೆ ಕರ್ನಾಟಕಕ್ಕೆ ಮತ್ತೊಮ್ಮೆ ಬಿಗ್ ಶಾಕ್ ಎದುರಾಗಿದೆ. ಮತ್ತೆ ತಮಿಳುನಾಡಿಗೆ 15 ದಿನ ಪ್ರತಿನಿತ್ಯ 2,600 ಕ್ಯೂಸೆಕ್ ನೀರು ಹರಿಸುವಂತೆ ಸಮಿತಿಯು (CWRC) ಸೂಚಿಸಿದೆ.
ದೆಹಲಿಯಲ್ಲಿ ಇಂದು ನಡೆದ CWRC ಸಭೆಯಲ್ಲಿ ರಾಜ್ಯಕ್ಕೆ ಮತ್ತೆ ಶಾಕ್ ನೀಡಿದೆ. 1 ನವೆಂಬರ್ ರಿಂದ ನವೆಂಬರ್ 15ರ ವರೆಗೆ ನೀರು ಬಿಡಲು ಕರ್ನಾಟಕ ಸಾಮರ್ಥ್ಯವಿದೆ. ಮತ್ತೆ ನಿತ್ಯ 2,600 ಕ್ಯೂಸೆಕ್ ನೀರು ಬಿಡುವಂತೆ ಇಂದಿನ ಸಭೆಯಲ್ಲಿ CWRC ಶಿಫಾರಸ್ಸು ಮಾಡಿದೆ. ಈ ತೀರ್ಫು ರಾಜ್ಯದ ರೈತರನ್ನು ಭಾರಿ ಸಂಕಷ್ಟಕ್ಕೆ ದೂಡಿದೆ. ಕರ್ನಾಟಕದಿಂದ ಕಾವೇರಿ ನೀರಾವರಿ ನಿಗಮದ ಎಂ.ಡಿ ಮಹೇಶ್ ಸಭೆಯಲ್ಲಿ ಪಾಲ್ಗೊಂಡಿದ್ದರು.
ಇದೇ ಅಕ್ಟೋಬರ್ 11 ರಂದು ದೆಹಲಿಯಲ್ಲಿ CWRC ಅಧ್ಯಕ್ಷ ವಿನೀತ್ ಗುಪ್ತಾ ನೇತೃತ್ವದಲ್ಲಿ ನಡದ ಸಭೆಯಲ್ಲಿ ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಸೂಚಿಸಲಾಗಿತ್ತು. ಪ್ರತಿನಿತ್ಯ 3,000 ಕ್ಯೂಸೆಸ್ ನಂತೆ ಮುಂದಿನ 15 ದಿನಗಳ ಕಾಲ ಕಾವೇರಿ ನೀರು ಹರಿಸುವಂತೆ CWMAಗೆ CWRC ಶಿಫಾರಸು ಮಾಡಿತ್ತು. ಇದೀಗ ಮತ್ತೆ ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ಸೂಚಿಸಿದ್ದು, ಕರ್ನಾಟಕ ಮತ್ತೆ ಸಂಕಷ್ಟಕ್ಕೆ ಸಿಲುಕಿದೆ.