Wednesday, January 22, 2025

ಬಿಜೆಪಿಯವರು ಆಪರೇಷನ್ ಕಮಲ ಮಾಡುತ್ತಿರುವುದು ಸತ್ಯ : ಸಚಿವ ಜಮೀರ್

ಬೆಂಗಳೂರು : ಬಿಜೆಪಿ ಅವರು ಆಪರೇಷನ್ ಕಮಲ ಮಾಡುತ್ತಿರುವುದು ಸತ್ಯ. ಆದರೆ, ಅವರು ಅದರಲ್ಲಿ ಯಶಸ್ವಿಯಾಗಲ್ಲ ಎಂದು ವಸತಿ ಸಚಿವ ಬಿ.ಝಡ್​ ಜಮೀರ್ ಅಹಮದ್ ಖಾನ್ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಆಪರೇಷನ್ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಬಿಜೆಪಿ ಅವರು ಆಪರೇಷನ್ ಮಾಡುತ್ತಿರುವುದು ನನ್ನ ಗಮನಕ್ಕೂ ಬಂದಿದೆ. ನನಗೆ ಮಾಹಿತಿಯೂ ಇದೆ. ಅವರು ಏನೇ ಪ್ರಯತ್ನ ಮಾಡಿದರೂ ಏನೂ ಮಾಡಲು ಆಗಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.

50 ಕೋಟಿ ಆಮಿಷ ಒಡ್ಡುತ್ತಿದ್ದಾರೆ

ನಮ್ಮ ಶಾಸಕರಿಗೆ ಬಿಜೆಪಿಯವರು ಆಮಿಷ ಹುಟ್ಟಿಸುತ್ತಿದ್ದಾರೆ. 50 ಕೋಟಿ ರೂಪಾಯಿ ಕೊಡುತ್ತೇವೆ, ಮಂತ್ರಿ ಮಾಡುತ್ತೇವೆ ಎಂದು ಆಮಿಷ ಒಡ್ಡುತ್ತಿದ್ದಾರೆ. ಬಿಜೆಪಿ ಅವರು ಏನೇ ಮಾಡಿದರೂ ನಮ್ಮ ಒಬ್ಬ ಶಾಸಕನೂ ಬಿಜೆಪಿಗೆ ಹೋಗಲ್ಲ. ಬಿಜೆಪಿ ಅವರು ಎಷ್ಟೇ ಆಪರೇಷನ್ ಮಾಡಿದರೂ ಅವರು ಯಶಸ್ವಿಯಾಗಿಲ್ಲ ಎಂದು ಸಚಿವ ಜಮೀರ್ ಹೇಳಿದ್ದಾರೆ.

RELATED ARTICLES

Related Articles

TRENDING ARTICLES