Wednesday, January 22, 2025

ಇಂದು ಕಿಲ್ಲರ್​ ಬಿಎಂಟಿಸಿಗೆ ಎರಡು ಬಲಿ!

ಬೆಂಗಳೂರು: ಕಿಲ್ಲರ್​ ಬಿಎಂಟಿಸಿಗೆ ಇಂದು ಬೆಳಗ್ಗೆ ನಗರದ ಎರಡು ಕಡೆ ಇಬ್ಬರು ಬಲಿಯಾಗಿರುವ ಘಟನೆ ನಡೆದಿದೆ.

ಹುಳಿಮಾವು ವ್ಯಾಪ್ತಿಯ ಅರಕೆರೆಯ ಶ್ರೀ ಸಾಯಿ ಗಾರ್ಮೆಂಟ್ಸ್ ಬಳಿ ಅಪಘಾತ ನಡೆದಿದ್ದು, ರಸ್ತೆ ದಾಟುವಾಗ ಮಹಿಳೆಗೆ BMTC ಬಸ್​ ಡಿಕ್ಕಿ ಹೊಡೆದಿದೆ. ವೀಣಾ ಎಂಬುವರು ಸ್ಥಳದಲ್ಲೇ ಸಾವನಪ್ಪಿದ್ದಾರೆ. ಸ್ಥಳಕ್ಕೆ ಹುಳಿಮಾವು ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಕೇರಳದಲ್ಲಿ ಭಾರಿ ಸ್ಫೋಟ: ಒಬ್ಬ ಸಾವು, 20 ಜನರಿಗೆ ಗಂಭೀರ ಗಾಯ!

ಇನ್ನು ಗೋವಿಂದರಾಜನಗರದ ಬೈಟು ಕೆಫೆ ಬಳಿ ದ್ವಿಚಕ್ರ ವಾಹನಕ್ಕೆ ಬಿಎಂಟಿಸಿ ಬಸ್​​ ಡಿಕ್ಕಿ ಹೊಡೆದಿದೆ. ದ್ವಿಚಕ್ರ ವಾಹನ ಸವಾರ ಕುಮಾರ್​ ಸ್ಥಳದಲ್ಲೇ ಸಾವನಪ್ಪಿದ್ದಾನೆ. ಸ್ಥಳಕ್ಕೆ ವಿಜಯನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES