Wednesday, December 25, 2024

2 ನೇ ದಿನಕ್ಕೆ ಕಾಲಿಟ್ಟ ಧರ್ಮ ಸಂರಕ್ಷಣಾ ರಥಯಾತ್ರೆ!

ದಕ್ಷಿಣ ಕನ್ನಡ: ಎರಡನೇ‌ ದಿನದ ಧರ್ಮಸಂರಕ್ಷಣಾ ರಥಯಾತ್ರೆ ನಡೆಯುತ್ತಿದ್ದು, ಯಾತ್ರೆಗೆ ಬೆಳ್ತಂಗಡಿ ಬಳಿಯ ಗುರುವಾಯನಕೆರೆ ರತ್ನತ್ರಯ ಬಸದಿ ಬಳಿ ಅದ್ದೂರಿ ಸ್ವಾಗತ ಕೋರಲಾಗಿದೆ. ಇನ್ನು ಪಾದಯಾತ್ರೆ ಬಳಿಕ ವೀರೇಂದ್ರ ಹೆಗ್ಗಡೆಯವರು ಭಕ್ತರನ್ನು ಉದ್ದೇಶಿಸಿ ಮಾತನಾಡುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ.

ನಿನ್ನೆ ಕೊಲ್ಲೂರಿನಿಂದ ಕದ್ರಿವರೆಗೂ ರಥಯಾತ್ರೆ ಸಾಗಿತ್ತು. ಎಡನೀರು ಮಠದ ಸಚ್ಚಿದಾನಂದ ಭಾರತೀ ಸ್ವಾಮೀಜಿಗಳು ರಥಯಾತ್ರೆಗೆ ಚಾಲನೆ ನೀಡಿದ್ದರು. ಪ್ರದೀಪ್ ಕುಮಾರ್ ಕಲ್ಕೂರು, ರಾಘವೇಂದ್ರ ಶಾಸ್ತ್ರಿ, ನಾಗರಾಜ್ ಶೆಟ್ಟಿ, ಮೇಯರ್ ಸುದೀರ್ ಶೆಟ್ಟಿ ಭಾಗಿಯಾಗಿದ್ದಾರೆ.

ಇದನ್ನು ಓದಿ: ಇಂದು ಭಾರತ- ಇಂಗ್ಲೆಂಡ್​​ ಮುಖಾಮುಖಿ!

ಇನ್ನು ರಥಯಾತ್ರೆ ಸಾಗುವ ವೇಳೆ ಎಡನೀರು ಮಠದ ಸಚ್ಚಿದಾನಂದ ಭಾರತೀ ಸ್ವಾಮೀಜಿ ಪವರ್​ ಟಿವಿಯೊಂದಿಗೆ ಮಾತನಾಡಿದ್ದಾರೆ. ಧರ್ಮವನ್ನು ನಾವು ರಕ್ಷಿಸೋದಲ್ಲ. ಧರ್ಮ ನಮ್ಮನ್ನು ರಕ್ಷಿಸಬೇಕು. ಅಧರ್ಮಿಗಳನ್ನು ನಾಶ ಮಾಡಬೇಕಂತಿಲ್ಲ. ಅಧರ್ಮಿಗಳ ಮನಸ್ಸನ್ನು ಬದಲಿಸುವ ಶಕ್ತಿಕೊಡು ಎಂದು ಪ್ರಾರ್ಥಿಸಬೇಕು ಎಂದು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES