Sunday, December 22, 2024

ಪೊಲೀಸ್ ಠಾಣೆಯಲ್ಲೇ ಮಹಿಳಾ ಪೇದೆಗಳಿಗೆ ಸೀಮಂತ ಕಾರ್ಯ!

ಮಂಡ್ಯ: ಮಹಿಳಾ ಪೊಲೀಸ್ ಸಿಬ್ಬಂದಿಗಳಿಗೆ ಮಡಿಲಕ್ಕಿ ತುಂಬಿ ಸೀಮಂತ ಮಾಡಿರುವ ಘಟನೆ ಕೆ.ಆರ್.ಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ನಡೆದಿದೆ.

ಪೊಲೀಸ್ ಸಿಬ್ಬಂದಿ ಶಾರದಾ ಮತ್ತು ಅಸ್ಮಬಾನು ಎಂಬ ಇಬ್ಬರು ಗರ್ಭಿಣಿ ಮಹಿಳಾ ಪೇದೆಗಳಿಗೆ ಸೀಮಂತ ಕಾರ್ಯ ಮಾಡಲಾಗಿದೆ. ಪೊಲೀಸ್ ಇನ್ಸ್ಪೆಕ್ಟರ್ ಸುಮಾರಾಣಿ ಅವರು ಇಬ್ಬರು ಮಹಿಳಾ ಸಿಬ್ಬಂದಿಗಳಿಗೆ ಸೀಮಂತ ಕಾರ್ಯ ಮಾಡಿ ಶುಭ ಹಾರೈಸಿದ್ದಾರೆ.

ಇದನ್ನೂ ಓದಿ: ಅಂಗಡಿ, ಹೋಟೆಲ್​ ಗಳ ಮುಂದೆ ಕ್ಯಾಮರಾ ಅಳವಡಿಸಿ ಇಲ್ಲ ದಂಡ ಕಟ್ಟಿರಿ!

ಇಬ್ಬರು ಮಹಿಳಾ ಪೇದೆಗಳಿಗೆ ಉಡಿ ತುಂಬಿ, ಮಡಿಲಕ್ಕಿ ಹಾಕಿ, ಕೊಬ್ಬರಿ ಬೆಲ್ಲ, ತೆಂಗಿನಕಾಯಿ, ಅರಿಶಿಣ-ಕುಂಕುಮ ಹಾಗೂ ಬಳೆಗಳನ್ನು ನೀಡಿ ಸೀಮಂತ ಕಾರ್ಯ ಮಾಡಲಾಗಿದೆ. ಕೆಲಸದ ಒತ್ತಡದ ನಡುವೆಯೂ ಸೀಮಂತ ಕಾರ್ಯ ಅರ್ಥಪೂರ್ಣವಾಗಿ ನಡೆಸಲಾಗಿದೆ.

ಶಾರದಾ ಮತ್ತು ಅಸ್ಮಾಬಾನು ಅವರು ಕೆ.ಆರ್. ಪೇಟೆ ಪಟ್ಟಣ ಪೊಲೀಸ್ ಠಾಣೆಯ ಕಾರ್ಯ ನಿರ್ವಹಿಸುತ್ತಿದ್ದಾರೆ. ಪೊಲೀಸ್ ಠಾಣಾ ವತಿಯಿಂದ ಸೀಮಂತ ಕಾರ್ಯದ ಮೂಲಕ ಸಿಬ್ಬಂದಿಗಳನ್ನ ಗೌರವಿಸಿ ಪೊಲೀಸರು ಬೀಳ್ಕೊಟ್ಟಿದ್ದಾರೆ. ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES