Monday, December 23, 2024

ಬಿಡಿಎ ಅಧ್ಯಕ್ಷ ಗಾದಿ ಮೇಲೆ ಬಾಲಕೃಷ್ಣ ಕಣ್ಣು!

ಬೆಂಗಳೂರು : ನಿಗಮ ಮಂಡಳಿಗಳಿಗೆ ಶಾಸಕರನ್ನು ನೇಮಕ ಮಾಡುತ್ತಿರುವ ಹಿನ್ನೆಲೆ ಬಿಡಿಎ ಅಧ್ಯಕ್ಷ ಸ್ಥಾನ ನೀಡುವಂತೆ ಮಾಗಡಿ ಶಾಸಕ ಬಾಲಕೃಷ್ಣ ಪಟ್ಟು ಹಿಡಿದಿದ್ದಾರೆ. ಸಚಿವಸ್ಥಾನ ವಂಚಿತವಾಗಿರೋ ಬಾಲಕೃಷ್ಣ, ಇದೀಗ ಬಿಡಿಎ ಮೇಲೆ ಕಣ್ಣಿಟ್ಟಿದ್ದಾರೆ. ಬಿಡಿಎ ಅಧ್ಯಕ್ಷ ಸ್ಥಾನ ಕೊಟ್ರೆ ಕೊಡಿ ಇಲ್ಲ ಅಂದ್ರೆ ಯಾವುದೇ ನಿಗಮ ಬೇಡ ಅಂತಾ ಬಾಲಕೃಷ್ಣ ಹೇಳ್ತಿದ್ದಾರೆ ಎನ್ನಲಾಗಿದೆ.

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿಗೆ ಖಡಕ್ ಆಗಿ ತಮ್ಮ ಅಭಿಪ್ರಾಯ ತಿಳಿಸಿರುವ ಬಾಲಕೃಷ್ಣ, ಬಿಡಿಎ ಅಧ್ಯಕ್ಷ ಸ್ಥಾನ ಸಿಕ್ಕರೆ ಬೆಂಗಳೂರಿನಲ್ಲಿ ಹಿಡಿತ ಸಾಧಿಸಬಹುದು ಅನ್ನೋ ಪ್ಲ್ಯಾನ್​ ಹೊಂದಿದ್ದಾರೆ.

ಇದನ್ನೂ ಓದಿ: ಅಪ್ಪು 2ನೇ ವರ್ಷದ ಪುಣ್ಯಸ್ಮರಣೆ: ಸಮಾಧಿ ಬಳಿ ಅಭಿಮಾನಿಗಳ ಸಾಗರ!

ಮಾಜಿ ಸಿಎಂ H.D.ಕುಮಾರಸ್ವಾಮಿ ವಿರುದ್ದ ನೇರವಾಗಿ ಗುಡುಗುವ ಮೂಲಕ ಬಾಲಕೃಷ್ಣ ಹೆಚ್ಚು ಸುದ್ದಿಯಲ್ಲಿದ್ದಾರೆ. 5 ನೇ ಬಾರಿ ಶಾಸಕರಾಗಿರೋ ಬಾಲಕೃಷ್ಣ ಮೂರು ಪಕ್ಷಗಳಲ್ಲೂ ಶಾಸಕರಾಗಿದ್ದಾರೆ.

RELATED ARTICLES

Related Articles

TRENDING ARTICLES