ಕೇರಳ : ಕೇರಳದ ಸಮಾವೇಶವೊಂದರಲ್ಲಿ ಸ್ಫೋಟ ಸಂಭವಿಸಿದ್ದು ಒಬ್ಬರು ಸಾವನ್ನಪ್ಪಿ 20ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಇಂದು ಬೆಳಿಗ್ಗೆ ಎರ್ನಾಕುಲಂ ಜಿಲ್ಲೆಯ ಕಲಮಸ್ಸೆರಿಯ ಕನ್ವೆನ್ಷನ್ ಸೆಂಟರ್ನಲ್ಲಿ ನಡೆದಿದೆ.
ಪ್ರತ್ಯಕ್ಷದರ್ಶಿಗಳ ಹೇಳಿಕೆ ಪ್ರಕಾರ ಕನ್ವೆನ್ಷನ್ ಸೆಂಟರ್‌ನೊಳಗೆ ಯೆಹೋವನ ಸಾಕ್ಷಿಗಳ ಸಮಾವೇಶದ ವೇಳೆ ಅನೇಕ ಸ್ಫೋಟಗಳು ಸಂಭವಿಸಿವೆ. ಇದು ಭಯೋತ್ಪಾದಕ ದಾಳಿ ಎಂದು ಪ್ರಾಥಮಿಕ ಮೌಲ್ಯಮಾಪನದಿಂದ ತಿಳಿದು ಬಂದಿದೆ. ಬಾಂಬ್ ಸ್ಕ್ವಾಡ್, ಫೊರೆನ್ಸಿಕ್ಸ್ ತಂಡ ಮತ್ತು ಎನ್‌ಐಎ ತಂಡ ಸ್ಥಳಕ್ಕೆ ತಲುಪಿ ಪರಿಶೀಲನೆ ಮಾಡುತ್ತಿದೆ.
ಇದನ್ನು ಓದಿ: ಬಿಡಿಎ ಅಧ್ಯಕ್ಷ ಗಾದಿ ಮೇಲೆ ಬಾಲಕೃಷ್ಣ ಕಣ್ಣು!
5 ರಿಂದ 10 ಸೆಕೆಂಡುಗಳಲ್ಲಿ ನಾಲ್ಕು ಕಡೆ ಸ್ಫೋಟಗಳು ಸಂಭವಿಸಿದೆ. ವಿಧಿ ವಿಜ್ಞಾನ ಪ್ರಯೋಗಾಲಯ (FSL) ತಂಡಗಳು ಸ್ಥಳದಲ್ಲಿವೆ. ಇದು ಬಾಂಬ್ ಸ್ಫೋಟವೇ ಎಂಬುದು ತನಿಖೆಯಿಂದ ಸ್ಪಷ್ಟವಾಗಲಿದೆ. ಸ್ಫೋಟದ ಕಾರಣವನ್ನು ದೃಢಪಡಿಸಲಾಗಿಲ್ಲ ಎಂದು ಕಲಮಸ್ಸೆರಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕ್ರಿಶ್ಚಿಯನ್ ಗುಂಪಿನ ಸಮಾವೇಶ ಕೇಂದ್ರದಲ್ಲಿ ಸ್ಫೋಟ ಸಂಭವಿಸಿದೆ ಎಂದು ವರದಿಯಾಗಿದೆ.