Saturday, May 4, 2024

ನಾನು ನಿಶ್ಚಿಂತೆಯಿಂದ ಇರುತ್ತೇನೆ, ಮೌನಕ್ಕಿರುವ ಬೆಲೆ ಮಾತಿಗಿಲ್ಲ : ಡಾ. ವೀರೇಂದ್ರ ಹೆಗ್ಗಡೆ

ಧರ್ಮಸ್ಥಳ : ನಾನು ನಿಶ್ಚಿಂತೆಯಿಂದ ಇರುತ್ತೇನೆ. ಮೌನಕ್ಕಿರುವ ಬೆಲೆ ಮಾತಿಗಿಲ್ಲ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ನಡೆದ ಧರ್ಮಸಂರಕ್ಷಣಾ ‌ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ನಮಗೆ ಸಾಕಷ್ಟು ಪ್ರಸಾದ ಬಂದಿದೆ. ಹಲವು ದೇವಸ್ಥಾನದಿಂದ ನಮಗೆ ಪ್ರಸಾದ ಬಂದಿದೆ. ನಿಜವಾದ ಪ್ರೀತಿ, ಭಕ್ತಿ ಇಟ್ಟಿದ್ದಕ್ಕೆ ಧನ್ಯವಾದಗಳು. ನಿಮಗೆ, ನಿಮ್ಮ ಕುಟುಂಬಕ್ಕೆ ಧನ್ಯವಾದಗಳು. ಮೌನಕ್ಕಿರೋ ಬೆಲೆ , ಮಾತಿಗಿಲ್ಲ. ನಾನು ಅವರಾಗೆ ಮಾತಾಡಿದ್ರೆ ವ್ಯತ್ಯಾಸ ಗೊತ್ತಾಗೊದಿಲ್ಲ. ಸ್ವಾಮೀಜಿಗಳು ಮಂತ್ರಾಕ್ಷತೆ ಕೊಟ್ಟು ನಿಮ್ಮೊಂದಿಗೆ ಇದ್ದಾರೆ ಅಂದಿದ್ದಾರೆ. ನಿಮ್ಮೊಂದಿಗೆ ನಾನು ಇದ್ದೇನೆ ಎಂದು ಅಭಯ ನೀಡಿದರು.

ನನ್ನ ಪತ್ನಿ, ಸಹೋದರ, ಅವರ ಪುತ್ರರು ಸಾಕಷ್ಟು ನೋವುಂಡಿದ್ದಿದ್ದಾರೆ. ಮಳೆಯಿಂದ ಎಲ್ಲಾ ಕಷ್ಟ ಕಳೆದುಹೋಗಲಿ. ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಟೀಕೆ ಆಪತ್ತು ಬಂದಾಗ ನೀವು ಮಾಡಿದ ಪೂಜೆ, ಪ್ರಾರ್ಥನೆಗೆ ಬಲ ಬಂದಿದೆ. ನಾನು ನಿಶ್ಚಿಂತೆಯಿಂದ ಇರುತ್ತೇನೆ. ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರು ಸೇರಿ ಎಲ್ಲರೂ ಬೆಂಬಲಿಸಿದ್ದಾರೆ. ನಿಮ್ಮ ತ್ಯಾಗ ಎಲ್ಲವೂ ನಮ್ಮ ಸಂಪತ್ತು. ಮಹಾರಾಷ್ಟ್ರದಿಂದ ಕೇರಳದವರೆಗೆ ದೇವಸ್ಥಾನಕ್ಕೆ ಸಹಾಯ ಮಾಡಿದ್ದೇವೆ. ಹಿಂದೆಗಿಂತ ದುಪ್ಪಟ್ಟು ಸೇವೆ ಮಾಡುತ್ತೇನೆ ಎಂದು ಪೂಜ್ಯರು ಹೇಳಿದರು.

ಹೆಗ್ಗಡೆಯವರ ಪರವಾಗಿ ನಾವಿದ್ದೇವೆ

ಸಭೆ ಮುಕ್ತಾಯದ ಬಳಿಕ ಸನಾತನ ಪರಂಪರೆಯ ರಕ್ಷಣೆಗೆ ನಾವಿದ್ದೇವೆ. ಧರ್ಮಸ್ಥಳ ಪರಂಪರೆಯ ರಕ್ಷಣೆಗೆ, ಧರ್ಮಸ್ಥಳದ ಪರವಾಗಿ, ಹೆಗ್ಗಡೆಯವರ ಪರವಾಗಿ ನಾವಿದ್ದೇವೆ ಎಂದು ನೆರೆದಿದ್ದ ಭಕ್ತರು ಘೋಷಣೆ ಕೂಗಿದರು. ಹರಶಂಭೋ, ಮಹಾದೇವ, ಶಿವಶಂಕರ, ನೀಲಕಂಠ ಸಮೋಸ್ತುತೆ ಎಂದು ಪ್ರಾರ್ಥನೆ ಮೊಳಗಿಸಿದರು.

RELATED ARTICLES

Related Articles

TRENDING ARTICLES