Wednesday, January 22, 2025

ರಾಜಸ್ಥಾನ ಚುನಾವಣೆ: ಕಾಂಗ್ರೆಸ್‌ನಿಂದ 7 ಗ್ಯಾರಂಟಿ!

ರಾಜಸ್ಥಾನ: ಚುನಾವಣೆಗೆ ಇನ್ನು ಕೇವಲ ಒಂದು ತಿಂಗಳು ಬಾಕಿ ಉಳಿದಿರುವ ನಡುವೆಯೇ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಕಾಂಗ್ರೆಸ್‌ ಪಕ್ಷದ ವತಿಯಿಂದ 7 ಗ್ಯಾರಂಟಿಗಳನ್ನು ಘೋಷಿಸಿದ್ದಾರೆ.

ಈ ಪೈಕಿ 2 ಗ್ಯಾರಂಟಿಗಳು 3 ದಿನದ ಹಿಂದೆ ಘೋಷಣೆ ಆಗಿದ್ದರೆ, ಇನ್ನು 5 ಗ್ಯಾರಂಟಿಗಳು ಹೊಸ ಘೋಷಣೆಗಳಾಗಿವೆ. ಶುಕ್ರವಾರ ಕಾಂಗ್ರೆಸ್‌ ಸಭೆಯಲ್ಲಿ ಮಾತನಾಡಿದ ಗೆಹ್ಲೋಟ್ ತಾವು ಮರು ಆಯ್ಕೆಯಾದರೆ ಎಲ್ಲ 7 ಗ್ಯಾರಂಟಿಗಳನ್ನು ಜಾರಿ ಮಾಡುವ ಭರವಸೆ ನೀಡಿದರು.

ಇದನ್ನೂ ಓದಿ: ದಸರಾದಿಂದ KSRTC ಆದಾಯ ದುಪ್ಪಟ್ಟು!

ಇದರಲ್ಲಿ ಮನೆಯ ಯಜಮಾನತಿಗೆ ಗೃಹಲಕ್ಷ್ಮಿ ಯೋಜನೆ ಅಡಿ ವರ್ಷಕ್ಕೆ 10 ಸಾವಿರ ರೂ. ಹಾಗೂ 500 ರೂ. ನಲ್ಲಿ ಸಬ್ಸಿಡಿ ಸಿಲಿಂಡರ್‌ ನೀಡಿಕೆಯನ್ನು 3 ದಿನದ ಹಿಂದೆಯೇ ಪ್ರಕಟಿಸಿದ್ದರು. ಈ ಎರಡೂ ಸೇರಿ ಒಟ್ಟು 7 ಗ್ಯಾರಂಟಿಗಳನ್ನು ಶುಕ್ರವಾರ ಅವರು ಪ್ರಕಟಿಸಿದರು.

RELATED ARTICLES

Related Articles

TRENDING ARTICLES