ಬೆಂಗಳೂರು: ಹುಲಿ ಉಗುರು ಪ್ರಕರಣಕ್ಕೆ ಸಂಬಂಧಿಸಿ ಅರಣ್ಯಾಧಿಕಾರಿಗಳ ನಡೆ ವಿರುದ್ಧ ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ಗರಂ ಆಗಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಹುಲಿ ಉಗುರು ಧೈರ್ಯದ ಪ್ರತೀಕ ಎಂದು ಹಲವಾರು ಜನರು ಧರಿಸುತ್ತಲೇ ಬಂದಿದ್ದಾರೆ. ರಾಜ್ಯದೆಲ್ಲೆಡೆ ಈಗ ಹುಲಿ ಉಗರಿನ ಬಗ್ಗೆ ಬಹಳಷ್ಟು ಚರ್ಚೆ ನಡೆಯುತ್ತಿದೆ. ಹುಲಿ ಉಗುರಿನ ಪೆಂಡೆಂಟ್ ಧರಿಸಿದವರ ಅನೇಕರ ಬಂಧನವಾಗಿದೆ. ಅನೇಕರು ಇದನ್ನೇ ದಾಳವನ್ನಾಗಿ ಮಾಡಿಕೊಂಡಿದ್ದಾರೆ. ಹಲವರ ವಿರುದ್ಧ ದೂರು ನೀಡುವ ಕೆಲಸ ಮಾಡುತ್ತಿದ್ದಾರೆ. ಅರಣ್ಯಾಧಿಕಾರಿಗಳು ಪ್ರಚಾರದ ಗೀಳಿಗೆ ಬಿದ್ದವರಂತೆ ವರ್ತಿಸುತ್ತಿದ್ದಾರೆ.
ಇದನ್ನೂ ಓದಿ: ಹುಲಿ ಉಗುರು ಪೆಂಡೆಂಟ್: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರನಿಗೂ ಸಂಕಷ್ಟ!
ಆದರೆ, ಮಲೆನಾಡಿರು ಹಾಗೂ ಕರಾವಳಿ ಭಾಗದ ಅನೇಕ ಜನರ ಮನೆಯಲ್ಲಿ ಕಾಡಮ್ಮೆ, ಕಾಡುಕೋಣದ ಕೊಂಬುಗಳು, ಜಿಂಕೆಗಳ ಕೊಂಬುಗಳು ಅಲಂಕಾರಿಕವಾಗಿ ಇಟ್ಟುಕೊಂಡಿದ್ದಾರೆ. ಅವೆಲ್ಲವೂ ಹಲವಾರು ವರ್ಷಗಳಿಂದ ಅವರವರ ಮನೆಯಲ್ಲಿಟ್ಟುಕೊಂಡಿದ್ದಾರೆ. ಹುಲಿ ಉಗುರು ಧೈರ್ಯದ ಪ್ರತೀಕ ಎಂದು ಹಲವಾರು ಜನರು ಧರಿಸುತ್ತಲೇ ಬಂದಿದ್ದಾರೆ. ಏಕಾಏಕೀ ಎಲ್ಲರನ್ನೂ ಬಂಧಿಸುವುದು ಸರಿಯಾಗಲ್ಲ.
ನಾಳೆ ದಿನ ಅನೇಕ ಕುಟುಂಬದವರಿಗೆ ಜೈಲಿಗೆ ಹೋಗುವ ಪರಿಸ್ಥಿತಿ ಬರಲಿದೆ. ಕೂಡಲೇ ಅರಣ್ಯ ಸಚಿವರು ಹಾಗೂ ಅರಣ್ಯಾಧಿಕಾರಿಗಳು ಈ ಕುರಿತು ಕೂತು ಪರಾಮರ್ಶಿಸಲಿ ಎಂದು ಅವರು ಹೇಳಿದ್ದಾರೆ.