Sunday, January 19, 2025

ಜಮೀನು ವಿಚಾರವಾಗಿ ಸಂಬಂಧಿಕರ ನಡುವೆ ಮಾರಾಮಾರಿ!

ಮೈಸೂರು: ಜಮೀನು ವಿಚಾರವಾಗಿ ಸಂಬಂಧಿಗಳ ನಡುವೆ ಮಾರಾಮಾರಿ ನಡೆದು ಹಲವರಿಗೆ ಗಂಭೀರ ಗಾಯವಾಗಿರುವ ಘಟನೆ ಸಿದ್ದಲಿಂಗಪುರ ಗ್ರಾಮದಲ್ಲಿ ನಡೆದಿದೆ.

ಕಾಂಗ್ರೆಸ್ ಮುಖಂಡ ವಿಜಯಕುಮಾರ್ ಹಾಗೂ ಪುತ್ರ ಅಭಿಲಾಷ್ ವಿರುದ್ದ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಸಹೋದರ ಹಾಗೂ ಸಹೋದರರ ಮಕ್ಕಳ ಮೇಲೆ ಜಮೀನು ವಿಚಾರವಾಗಿ ಗಲಾಟೆ ಹಲ್ಲೆ ಮಾಡಲಾಗಿದೆ. ಎಲ್ಲರಿಗೂ ಸಮವಾಗಿ ಪಾಲು ನೀಡಿದ ನಂತರವೂ ಇಬ್ಬರು ಜಗಳವಾಡಿಕೊಂಡಿದ್ದಾರೆ.

ಇದನ್ನೂ ಓದಿ: ಹುಲಿ ಉಗುರು: ರಾಜ್ಯ ಸರ್ಕಾರದ್ದು ಸದಾರಮೆ ನಾಟಕ! – ಸಿಟಿ ರವಿ

ತಮಗೆ ಮತ್ತಷ್ಟು ನಿವೇಶನ ಜಮೀನು ಬರಬೇಕು ಅಂತಾ ಗಲಾಟೆ ಮಾಡಿಕೊಂಡಿದ್ದಾರೆ. ಗಲಾಟೆಯಲ್ಲಿ ಅಂಬರೀಶ್, ಎಲ್ಲಮ್ಮ, ನವೀನ್ ಕುಮಾರ್, ಸುಷ್ಮಾ ಜಗನ್ನಾಥ್, ಜಯಲಕ್ಷ್ಮಿಗೆ ಗಾಯವಾಗಿದ್ದು,
ಗಾಯಾಳುಗಳಿಗೆ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

RELATED ARTICLES

Related Articles

TRENDING ARTICLES