Sunday, January 19, 2025

ಬೆಂಗಳೂರಿನಲ್ಲಿ ಬೃಹತ್​ ಡ್ರಗ್​ ಜಾಲ ಪತ್ತೆ: 5.50 ಕೋಟಿ ಮೌಲ್ಯದ ಡ್ರಗ್ಸ್ ವಶ!

ಬೆಂಗಳೂರು: ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಬೃಹತ್ ಡ್ರಗ್ ಜಾಲ ಪತ್ತೆ ಹಚ್ಚಿದ್ದಾರೆ.

15 ದಿನಗಳಿಂದ ಪೆಡ್ಲರ್‌ಗಳ ಚಟುವಟಿಕೆ ಬಗ್ಗೆ ಸಿಸಿಬಿ ಕಾರ್ಯಾಚರಣೆ ನಡೆಸಿದ್ದು, 8 ವಿದೇಶಿ ಡ್ರಗ್​​ ಪೆಡ್ಲರ್​ಗಳು ಸೇರಿ 10 ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಡ್ರಗ್​ ಪೆಡ್ಲರ್​ಗಳಿಂದ 5.50 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ. ಹಣ ಗಳಿಸಲು ಡ್ರಗ್‌ ಪೆಡ್ಲಿಂಗ್​ನಲ್ಲಿ ತೊಡಗಿದ್ದ ಆರೋಪಿಗಳು ಅರೆಸ್ಟ್ ಆಗಿದ್ದಾರೆ.

ಕಾಡುಗೋಡಿ, K.R.ಪುರಂ, ಸೋಲದೇವನಹಳ್ಳಿ, HSR ​​ಲೇಔಟ್‌, ವೈಟ್‌ಫೀಲ್ಡ್‌, ಬಾಣಸವಾಡಿ, ಪರಪ್ಪನ ಅಗ್ರಹಾರ ಸೇರಿದಂತೆ ವಿವಿಧ​​ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿದ್ದ ಸಿಸಿಬಿ ಪೊಲೀಸರು 10 ಜನರನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ವರ್ತೂರು ಸಂತೋಷ್​ ಗೆ ಷರತ್ತುಬದ್ದ ಜಾಮೀನು ಮಂಜೂರು!

ಆರೋಪಿಗಳು ಕಡಿಮೆ ಸಮಯದಲ್ಲಿ ಹೆಚ್ಚಿನ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಕಡಿಮೆ ಬೆಲೆಗೆ ನಿಷೇಧಿತ ಮಾದಕ ವಸ್ತುಗಳನ್ನು ಖರೀದಿ ಮಾಡಿ ಅವುಗಳನ್ನು ಕಾಲೇಜು ವಿದ್ಯಾರ್ಥಿಗಳು, ಐಟಿ-ಬಿಟಿ ಉದ್ಯೋಗಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಇನ್ನು ಬಂಧಿತರಿಂದ ಎಂಡಿಎಂಎ ಕ್ರಿಸ್ಟೆಲ್‌ 3,806 ಮಾತ್ರೆ,​​​​​ 50 ಗ್ರಾಂ ಕೊಕೆನ್, ಎಕ್ಸ್‌ಟಿಸಿ ಪಿಲ್ಸ್‌ 25, ಎಲ್‌ಎಸ್‌ಡಿ ಸ್ಟ್ರೀಪ್ಸ್‌ 50, 5 ಕೆಜಿ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ್ದ 1 ಕಾರು, 3 ಬೈಕ್‌, 9 ಮೊಬೈಲ್‌ ಜಪ್ತಿ ಮಾಡಲಾಗಿದೆ. ಎನ್‌ಡಿಪಿಎಸ್‌ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರಿದಿದೆ.

RELATED ARTICLES

Related Articles

TRENDING ARTICLES