Wednesday, January 22, 2025

ಅರಣ್ಯ ಅಧಿಕಾರಿಗಳಿಂದ ಸಾಮಾನ್ಯರಿಗೊಂದು ನ್ಯಾಯ, ಸೆಲೆಬ್ರಿಟಿಗಳಿಗೊಂದು ನ್ಯಾಯ!?

ಬೆಂಗಳೂರು: ಹುಲಿ ಉಗುರು ಧರಿಸಿದ್ದ ಬಿಗ್​ ಬಾಸ್​ ಸ್ಪರ್ಧಿ ಸಂತೋಷ್​ ಬಂಧನದ ಬಳಿಕ, ಹುಲಿ ಉಗುರು ಧರಿಸಿದ್ದ ಸ್ಯಾಂಡಲ್​​ವುಡ್​ ನಟರ ಬಳಿ ಇದ್ದ ಲಾಕೆಟ್​ ವಶಕ್ಕೆ ಪಡೆಯಲಾಗಿದೆ.

ಹುಲಿ ಉಗುರು ಧರಿಸಿದ್ದ ಸಂತೋಷ್​ನನ್ನು ಅರೆಸ್ಟ್​ ಮಾಡಿ ಬಳಿಕ ತನಿಖೆ ಕೈಗೊಳ್ಳಲಾಗಿದೆ. ಆದರೆ, ನಟರಿಗೆ ಕೇವಲ ನೋಟಿಸ್​ ನೀಡಿ ಲಾಕೆಟ್​ ವಶಪಡಿಸಿಕೊಂಡಿದ್ದಾರೆ. ಸಾಮಾನ್ಯ ಜನರಿಗೆ ಒಂದು ನ್ಯಾಯ. ಸೆಲೆಬ್ರಿಟಿಗಳಿಗೆ ಒಂದು ನ್ಯಾಯಾನ ಎಂಬ ಅನುಮಾನ ಮೂಡಿದೆ.

ಇದನ್ನೂ ಓದಿ: ಅರ್ಹತೆ ಮತ್ತು ಪ್ರತಿಭೆಗೆ ಅವಕಾಶ ನೀಡಿ ಪ್ರಶಸ್ತಿಗೆ ಆಯ್ಕೆಮಾಡಿ: ಸಿಎಂ ಸೂಚನೆ!

ಅರಣ್ಯ ಇಲಾಖೆ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕ್ತಿದ್ದಾರೆ. ಇನ್ನು ಸೆಲೆಬ್ರಿಟಿಗಳಿಗೆ ನೋಟಿಸ್​ ನೀಡಿರುವ ಅಧಿಕಾರಿಗಳು, ಕಾಲಮಿತಿ ವಿಧಿಸಿಲ್ಲ. ಇಷ್ಟೇ ಸಮಯದಲ್ಲಿ ಬಂದು ಉತ್ತರಿಸಿ ಎಂದು ನೋಟಿಸ್​ನಲ್ಲಿ ಉಲ್ಲೇಖಿಸಿಯೂ ಇಲ್ಲ ಎಂದು ಭಾರಿ ಆಕ್ರೋಶ ವ್ಯಕ್ತವಾಗಿದೆ.

RELATED ARTICLES

Related Articles

TRENDING ARTICLES