Sunday, December 22, 2024

ನಿಮ್ಮನ್ನ ರಂಜಿಸಿದ್ದಕ್ಕೆ ನೀಡುವ ಉಡುಗೊರೆ ಇದೇನಾ: ಜಗ್ಗೇಶ್​ ಟ್ವೀಟ್​ ವೈರಲ್​

ಬೆಂಗಳೂರು: ನಟ ಜಗ್ಗೇಶ್ ಸೋಶಿಯಲ್ ಮೀಡಿಯಾದಲ್ಲಿ ಬೇಸರದ ಮಾತನ್ನ ಹಂಚಿಕೊಂಡಿದ್ದಾರೆ. ತಾಯಿ ಕೊಟ್ಟ ಕಾಣಿಕೆ ದೂರವಾದ ಬಗ್ಗೆ ನೋವನ್ನ X ಖಾತೆಯ ಮೂಲಕ‌ ಹೊರಹಾಕಿದ್ದಾರೆ.

ಸಮಾಜದಲ್ಲಿ ಅನೇಕ ಕಾಡುಪ್ರಾಣಿ ರೂಪದ ಜನರಿದ್ದಾರೆ ಅಂಥ ಕೊಳಕರನ್ನು ಬೆತ್ತಲು ಮಾಡಿ ಕಲಾವಿದರ ವಿಷಯ ಬಂದರೆ ಆರ್ಭಟವೇಕೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಹುಲಿ ಉಗುರು ಪ್ರಕರಣ: ವರ್ತೂರು ಸಂತೋಷ್​ ಜಾಮೀನು ಆದೇಶ ನಾಳೆಗೆ ಕಾಯ್ದಿರಿಸಿದ ನ್ಯಾಯಾಲಯ!

ಈ ಕುರಿತು ತಮ್ಮ ಎಕ್ಸ್​ ಖಾತೆಯಲ್ಲಿ ಇಷ್ಟು ವರ್ಷ ನಿಮ್ಮನ್ನ ರಂಜಿಸಿದ್ದಕ್ಕೆ ನೀಡುವ ಉಡುಗೊರೆ ಇದೇನಾ ಎಂದು ಪ್ರಶ್ನಿಸಿದ್ದಾರೆ. ನಾನು ಏನೇ ಕಳೆದುಕೊಂಡರೂ ಸಂಕಟ ಪಡೋದಿಲ್ಲ. ನನ್ನ ಅಮ್ಮನ‌ ಕಡೆಯ ಪ್ರೀತಿಯನ್ನ ಕಳೆದುಕೊಂಡಿದ್ದು ಶೂನ್ಯದಂತೆ ಆಗುತ್ತಿದೆ. ದೇವರಿದ್ದಾನೆ. ಉತ್ತರಿಸಲು ನಮಗೂ ಕಾಲ ಬರುತ್ತದೆ ಎಂದು ಬರೆದುಕೊಂಡಿದ್ದಾರೆ.

RELATED ARTICLES

Related Articles

TRENDING ARTICLES