Thursday, January 23, 2025

ಟವಲ್​ ನಿಂದ ಸುತ್ತಿ ವೃದ್ದೆಯ ಕೊಂದ ದುಷ್ಕರ್ಮಿಗಳು!

ಮಂಡ್ಯ: ಟವಲ್​ನಿಂದ ಉಸಿರುಗಟ್ಟಿಸಿ ವೃದ್ದೆಯನ್ನು ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಹೆಬ್ಬಾಳ ಸಮೀಪದ ಕಾರ್ಖಾನೆಯಲ್ಲಿ ನಡೆದಿದೆ.

ಕಾಫಿ ಪುಡಿ ಅಂಗಡಿ-ಚಿಕೋರಿ ಕಾರ್ಖಾನೆಯ ಮಾಲೀಕ ರಮೇಶ್ ಪತ್ನಿ ನಳಿನಿ ರಮೇಶ್ (62) ಮೃತ ವೃದ್ದೆ. ಚಿಕೋರಿ ಕಾರ್ಖಾನೆಯ ಮನೆಯಲ್ಲಿದ್ದ ವಾಸವಿದ್ದ ವೇಳೆ ದುಷ್ಕರ್ಮಿಗಳು ಟವಲ್​ ಸುತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಮಂಡ್ಯ ನಗರದ ವಿದ್ಯಾನಗರ ನಿವಾಸಿಗಳಾದ ರಮೇಶ್​ ಮತ್ತು ನಳಿನಿ ದಂಪತಿ, ಉದ್ಯಮ ಮಾಡಲು ಕಾಫೀ ಪುಡಿ ಹಾಗು ಚಿಕೋರಿ ಕಾರ್ಖಾನೆಯನ್ನು ಬ್ಯಾಂಕ್​ ನಲ್ಲಿ ಅಡಮಾನ ಇಟ್ಟಿದ್ದರು, ಈ ವೇಳೆ ಸಾಲ ತೀರಿಸಲಾಗದ ಕಾರಣ ಕಾರ್ಖಾನೆಯನ್ನು ಬ್ಯಾಂಕ್ ಸಿಬ್ಬಂದಿ ವಶಕ್ಕೆ ಪಡೆದಿತ್ತು, ಈ ನಡುವೆ ಮಂಡ್ಯ ಬಿಟ್ಟು ಮೈಸೂರಿನ ವೃದ್ದಾಶ್ರಮದಲ್ಲಿದ್ದ ದಂಪತಿಗಳು ವಾಸವಿದ್ದರು.

ಇದನ್ನೂ ಓದಿ: ಹುಲಿ ಉಗುರು ಪ್ರಕರಣ: ತಲೆತಗ್ಗಿಸುವ ಕೆಲಸ ಮಾಡಿಲ್ಲ, ಮಾಡೋದಿಲ್ಲ- ನಟ ಜಗ್ಗೇಶ್​ ಟ್ವೀಟ್​

ಇತ್ತೀಚೆಗೆ ಮೃತ ನಳಿನಿ, ಮಂಡ್ಯದ ಚಿಕೋರಿ ಕಾರ್ಖಾನೆಯ ಮನೆಯಲ್ಲಿ ವಾಸವಿದ್ದರು, ಈ ಸಂದರ್ಭದಲ್ಲಿ ಯಾರೋ ದುಷ್ಕರ್ಮಿಗಳು ಟವಲ್ ನಿಂದ ಬಿಗಿದು ವೃದ್ದೆಯ ಕೊಲೆ ಮಾಡಿದ್ದಾರೆ. ಆಸ್ತಿಗಾಗಿ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ.

ಘಟನಾ ಸ್ಥಳಕ್ಕೆ ಮಂಡ್ಯ ಎಸ್ಪಿ ಎನ್.ಯತೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತ ವೃದ್ದೆಯ ಶವವನ್ನು ಮಂಡ್ಯ ಮಿಮ್ಸ್ ಶವಗಾರಕ್ಕೆ ರವಾನೆ ಮಾಡಿದ್ದಾರೆ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES