Sunday, December 22, 2024

Worldcup 2023: ವೇಗದ ಶತಕ ಸಿಡಿಸಿ ಇತಿಹಾಸ ನಿರ್ಮಿಸಿದ ಮ್ಯಾಕ್ಸ್​ವೆಲ್!

ವಿಶ್ವಕಪ್​ 2023: ವಿಶ್ವ ಕಪ್​ ಕ್ರಿಕೆಟ್​ ನಲ್ಲಿ ಆಸ್ಟ್ರೇಲಿಯಾದ ಆಟಗಾರ ಗ್ಲೆನ್​ ಮ್ಯಾಕ್ಸ್​ ವೆಲ್​ ಕೇವಲ 40 ಎಸೆತಗಳಲ್ಲಿ ಶತಕ ಪೂರೈಸಿ ಅತ್ಯಂತ ವೇಗದ ಶಕರ ಪೂರೈಸಿ ಇತಿಹಾಸ ನಿರ್ಮಿಸಿದ್ದಾರೆ.

ಇಂದು ದೆಹಲಿಯ ಅರುಣ್​ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 24ನೇ ಪಂದ್ಯದಲ್ಲಿ ನೆದರ್​ಲ್ಯಾಂಡ್​ ಮತ್ತು ಆಸ್ಟ್ರೇಲಿಯಾ ನಡುವಿನ ಮ್ಯಾಚ್​​ನಲ್ಲಿ ಅಬ್ಬರಿಸಿದ ಮ್ಯಾಕ್ಸ್​ವೆಲ್​ ಕೇವಲ 40 ಎಸೆತಗಳಲ್ಲಿ ಶತಕ ಪೂರೈಸಿದ್ದಾರೆ. ಎಂಟು ಸಿಕ್ಸ್​ ಮತ್ತು 7 ಫೋರ್​ಗಳನ್ನು ಸಿಡಿಸುವ ಮೂಲಕ ವೇಗದ ಶತಕ ಪೂರೈಸಿದ್ದಾರೆ.

ಇದರೊಂದಿಗೆ ಅತಿವೇಗದ ಶತಕ ಪೂರೈಸಿದ ಖ್ಯಾತಿಗೆ ಆಸ್ಟ್ರೇಲಿಯಾ ಕ್ರಿಕೆಟಿಗ ಗ್ಲೇನ್​ ಮ್ಯಾಕ್ಸ್​ವೆಲ್ ಭಾಜನರಾಗಿದ್ದಾರೆ.

RELATED ARTICLES

Related Articles

TRENDING ARTICLES