Wednesday, January 22, 2025

ಹುಲಿ ಚರ್ಮ ಕುರಿತು ವಿನಯ್​ ಗುರೂಜಿ ಸ್ಪಷ್ಟನೆ!

ಬೆಂಗಳೂರು: ಹುಲಿ ಉಗುರಿನ ಲಾಕೆಟ್​ ಧರಿಸಿದ ಪ್ರಕರಣಕ್ಕೆ ಸಂಬಂಧಿಸಿ ಬಿಗ್ ಬಾಸ್ ಸ್ಪರ್ಧಿ ವರ್ತೂರ್ ಸಂತೋಷ್ ಬಂಧನವಾದ ಬೆನ್ನಲ್ಲೇ ಜಗ್ಗೇಶ್​​, ದರ್ಶನ್​,  ನಿಖಿಲ್​​​ ಕುಮಾರಸ್ವಾಮಿ ಅವರ ಬಳಿ ಕೂಡಾ ಹುಲಿ ಉಗುರಿನ ಲಾಕೆಟ್ ಇದೆ. ವಿನಯ್​​​ ಗೂರೂಜಿ ಬಳಿ ಹುಲಿ ಚರ್ಮ ಇದೆ​​ ಎನ್ನುವ ಕೆಲವು ಫೋಟೋ ವಿಡಿಯೋಗಳು ಸೋಶಿಯಲ್​​​ ಮೀಡಿಯಾದಲ್ಲಿ ಹರಿದಾಡುತ್ತಿವೆ.

ಈ ಸಂಬಂಧ  ವಿನಯ್​​ ಗೂರುಜಿ ಮಾಧ್ಯಮಗಳ ಮುಂದೆ ಸ್ಪಷ್ಟನೆ ನೀಡಿದ್ದು 2 ವರ್ಷದ ಹಿಂದೆ ಶಿವಮೊಗ್ಗ ಮೂಲದ ಅಮರೇಂದ್ರ ಕಿರೀಟಿ ಎಂಬುವರಿಂದ ಉಡುಗೊರೆಯಾಗಿ ಸ್ವೀಕರಿಸಲಾಗಿತ್ತು, ಕಿರೀಟಿಯವರು ಅರಣ್ಯ ಅಧಿಕಾರಿಗಳ ಅನುಮತಿ ಪಡೆದು ಉಡುಗೊರೆ ನೀಡಿದ್ದರು. ಅಮರೇಂದ್ರ ಅವರ ತಂದೆ ಕಾಲದಿಂದಲೂ ಅವರ ಮನೆತಲ್ಲಿದ್ದ ಹುಲಿ ಚರ್ಮ ಆ ಹುಲಿ ಚರ್ಮವನ್ನ ವಿನಯ್ ಗುರೂಜಿಗೆ ನೀಡಿದ್ದರು.

ಇದನ್ನೂ ಓದಿ: ನಾನು ಧರಿಸಿರುವ ಹುಲಿ ಉಗುರು ಕೃತಕ: ನಿಖಿಲ್​ ಕುಮಾರಸ್ವಾಮಿ ಟ್ವೀಟ್​

ಉಡುಗೊರೆಯಾಗಿ ಸ್ವೀಕರಿಸಿದ್ದ ಹುಲಿ ಚರ್ಮವನ್ನು 2022 ರಲ್ಲಿ ಅದನ್ನ ಅರಣ್ಯ ಇಲಾಖೆಗೆ ಹಿಂದಿರುಗಿಸಿಸಲಾಗಿದೆ ಎಂದು ಹುಲಿ ಚರ್ಮದ ಬಗ್ಗೆ ಸ್ಪಷ್ಟನೆ ನೀಡಿದ ವಿನಯ್ ಗುರೂಜಿ ಸ್ಪಷ್ಟನೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES