Monday, December 23, 2024

ನಟ ದರ್ಶನ್​ ಬಳಿ ಇದ್ದ ಪೆಂಡೆಂಟ್​ ವಶಕ್ಕೆ ಪಡೆದ ಆರ್​ ಎಫ್​ ಓ ತ್ಯಾಗರಾಜ್​!

ಬೆಂಗಳೂರು: ಹುಲಿ ಉಗುರು ಬಳಕೆ ವಿಚಾರಕ್ಕೆ ಸಂಬಂಧಿಸಿ ನಟ ದರ್ಶನ್​ ಬಳಿ ಇದ್ದ ಹುಲಿ ಉಗುರಿನ ಪೆಂಡೆಂಟನ್ನು ಅರಣ್ಯ ಇಲಾಖೆ ಅಧಿಕಾರಿಳು ವಶಕ್ಕೆ ಪಡೆದಿದ್ದಾರೆ.

ಆರ್ ಎಫ್​ ಓ ತ್ಯಾಗರಾಜ್​ ನೇತೃತ್ವದ ತಂಡ ಇಂದು ನಟ ದರ್ಶನ್​ ರ ಬೆಂಗಳೂರಿನ  ಆರ್​ ಆರ್​ ನಗರ ನಿವಾಸಕ್ಕೆ ಭೇಟಿ ನೀಡಿದ್ದು ಈ ವೇಳೆ ದರ್ಶನ್​ ಬಳಿ ಇದ್ದ ಹುಲಿ ಉಗುರನ್ನು ವಶಕ್ಕೆ ಪಡೆದಿದ್ದಾರೆ. ಲಾಕೆಟ್​ ವಶಕ್ಕೆ ಪಡೆದ ಬಳಿಕ ನಟ ದರ್ಶನ್​ ಅವರಿಂದ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಹುಲಿ ಚರ್ಮ ಕುರಿತು ವಿನಯ್​ ಗುರೂಜಿ ಸ್ಪಷ್ಟನೆ!

ಈ ವೇಖೆ ನಟ ದರ್ಶನ್​ ಅವರಿಗೆ ಹುಲಿ ಉಗುರಿನ ಪೆಂಡೆಂಟ್​ ವಿಚಾರವಾಗಿ ಸಾಲು ಸಾಲು ಪ್ರಶ್ನೆಗಳನ್ನು ಅರಣ್ಯಾಧಿಕಾರಿ ತ್ಯಾಗರಾಜ್​ ನೇತೃತ್ವದ ತಂಡ ಕೆಳಿ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳುತ್ತಿದ್ದಾರೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ: ಯಾವುದೇ ವನ್ಯ ಜೀವಿಗೆ ಸಂಬಂಧಿಸಿದ ವಸ್ತುಗಳು, ಅಂದರೆ ಚರ್ಮ, ಮೂಳೆ. ಕೊಂಬು, ಕೂದಲು ಇತ್ಯಾದಿ ವಸ್ತುಗಳ ಸಂಗ್ರಹ ತಪ್ಪು. ಅಂತಹ ಸಂಗ್ರಹಗಳಿದ್ದರೆ ಕೂಡಲೇ ಇಲಾಖೆಗೆ ಒಪ್ಪಿಸಬೇಕು. ಇಲ್ಲವೇ ಇಲಾಖೆಯಿಂದ ಸೂಕ್ತ ಪ್ರಮಾಣ ಪತ್ರ ಪಡೆಯಬೇಕು. ಅಕ್ರಮ ಎಂದು ಸಾಬೀತಾದರೆ 3 ರಿಂದ 7 ವರ್ಷ ಜೈಲು ಮತ್ತು ಕನಿಷ್ಠ 10000 ರೂ ದಂಡ ವಿಧಿಸುವ ಸಾಧ್ಯತೆ ಇದೆ.

RELATED ARTICLES

Related Articles

TRENDING ARTICLES