Friday, November 22, 2024

ದಸರಾ ಮುಕ್ತಾಯ: K.R. ಮಾರುಕಟ್ಟೆಯಲ್ಲಿ ರಾಶಿ ರಾಶಿ ಕಸ!

ಬೆಂಗಳೂರು : ನಿನ್ನೆ ನಗರದಲ್ಲಿ ಆಯುಧ ಪೂಜೆ ಹಾಗೂ ವಿಜಯದಶಮಿ ಹಿನ್ನೆಲೆ ಬೆಂಗಳೂರು ನಗರದ ಮಾರುಕಟ್ಟೆ ಪ್ಲೈ ಓವರ್ ಕೆಳಗೆ ರಾಶಿ ರಾಶಿ ಕಸ ಸಂಗ್ರಹವಾಗಿದೆ. ನಿನ್ನೆಯಿಂದಲೂ ಬಿಬಿಎಂಪಿ ಪೌರ ಕಾರ್ಮಿಕರು ಕಸ ತೆರವು ಮಾಡುತ್ತಿದ್ದರೂ ಇನ್ನೂ ಮುಗಿಯಾದಷ್ಟು ಕಸದ ರಾಶಿ ಸಂಗ್ರಹವಾಗಿದೆ.

ಹಬ್ಬದ ಕಸ ತೆರವು ಮಾಡಲು ಎರಡು ದಿನಗಳಾದರು ಬೇಕು ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ. ಸಾಮಾನ್ಯ ದಿನಗಳಲ್ಲಿ 4 ಸಾವಿರ ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತದೆ ಆದರೆ ಹಬ್ಬದ ಸಂದರ್ಭದಲ್ಲಿ 30 ರಿಂದ 40 ರಷ್ಟು ತ್ಯಾಜ್ಯ ಹೆಚ್ಚಳವಾಗಿದೆ. ಹಬ್ಬದ ಸಂದರ್ಭದಲ್ಲಿ ಹೆಚ್ಚುವರಿ ತ್ಯಾಜ್ಯ ಉತ್ಪತ್ತಿ ಹಿನ್ನೆಲೆ ಹೆಚ್ಚುವರಿ ವಾಹನ ಹಾಗೂ ಸಿಬ್ಬಂದಿಗಳ ನಿಯೋಜನ ಸಹ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: Israel Hamas War : ಯುದ್ಧದಲ್ಲಿ 4,651 ಹೆಚ್ಚು ಪ್ಯಾಲೆಸ್ತೇನಿಯರು ಬಲಿ

ಇನ್ನು ಕಸ ವಿಲೇವಾರಿ ಕುರಿತಂತೆ ನಗರದ ಹಲವು ಮಾರುಕಟ್ಟೆಗೆ ತೆರಳಿ ತಪಾಸಣೆ ನಡೆಸುವುದಾಗಿ ಬಿಬಿಎಂಪಿ ಘನತ್ಯಾಜ್ಯ ಘಟಕದ ಅಧಿಕಾರಿಗಳು ಹೇಳಿದ್ದಾರೆ.

RELATED ARTICLES

Related Articles

TRENDING ARTICLES