Wednesday, January 22, 2025

ರಾಜಕೀಯದಲ್ಲಿ ವಿಲನ್ ಇದ್ದರೆ ಅದು HDKನೇ: ಸಿಎಂ

ಮೈಸೂರು: ರಾಜಕೀಯದಲ್ಲಿ ವಿಲನ್ ಇದ್ದರೆ ಅದು ಮಿಸ್ಟರ್ ಕುಮಾರಸ್ವಾಮಿನೇ ಅಂತ ಸಿಎಂ ಸಿದ್ದರಾಮಯ್ಯ ಖಾರವಾಗಿ ಹೇಳಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ಸರಕಾರ ಬೀಳುವಾಗ ಅಮೆರಿಕದಲ್ಲಿ ಕೂತಿದ್ರು ಇದಕ್ಕೆ ಏನೂ ಕರೆಯಬೇಕು. ಇಡೀ ಒಂದು ವರ್ಷ ಎರಡು ತಿಂಗಳು ತಾಜ್ ವೆಸ್ಟ್ ಎಂಡ್​​​​ನಲ್ಲಿ ಕಾಲ ಕಳೆದರು.
ವಿಧಾನಸಭೆಯಲ್ಲಿ ಬಿಜೆಪಿ ಅವರೇ ಸರಕಾರ ಬೀಳಿಸಿದ್ದು ಅಂತ ಹೇಳಿದ್ದರು. ಇದು ರೆಕಾರ್ಡ್ ಆಗಿದೆ. ಅಸೆಂಬ್ಲಿ ರೆಕಾರ್ಡ್ ಬೇಕಾದರೆ ಬಿಡುಗಡೆ ಮಾಡುತ್ತೇನೆ.

ಸಚಿವರು, ಶಾಸಕರ ಭೇಟಿ ಮಾಡದೆ ಹೋಟೆಲ್​​​ನಲ್ಲಿ ಕೂತು ಈಗ ನನ್ನ ಮೇಲೆ ಆರೋಪ ಮಾಡುತ್ತಾರೆ. ರಾಜಕೀಯವಾಗಿ ಹತಾಶರಾಗಿ ಬಾಯಿಗೆ ಬಂದ ರೀತಿ ಮಾತಾಡಿದ್ದಾರೆ. ಬಿಜೆಪಿಯವರು ಹತಾಶರಾಗಿದ್ದಾರೆ. ಬಿಜೆಪಿಗಿಂತ ಕುಮಾರಸ್ವಾಮಿ ಜಾಸ್ತಿ ಹತಾಶರಾಗಿದ್ದಾರೆ. ಬಿಜೆಪಿ-ಜೆಡಿಎಸ್ ​ದ್ದು ಕುಂಟ-ಕುರುಡರ ಕಥೆ ಆಗಿದೆ. ಇವರು ಅವರ ಮೇಲೆ ಅವರು ಇವರ ಮೇಲೆ ಡಿಪೆಂಡ್ ಆಗಿದ್ದಾರೆ. ಖಾಲಿ ಡಬ್ಬ ಮಾತ್ರ ಶಬ್ದ ಜಾಸ್ತಿ ಮಾಡುತ್ತೆ. ತುಂಬಿದ ಕೊಡ ತುಳುಕುವುದಿಲ್ಲ ಎಂದರು.

RELATED ARTICLES

Related Articles

TRENDING ARTICLES