ಮೈಸುರು : ನಾಡಹಬ್ಬ ದಸರಾ ಮೇಲೆಯೂ ಉಗ್ರರ ಕರಿನೆರಳು ಬಿದ್ದಿದ್ದು, ರಾಜ್ಯ ಡಿಜಿ-ಐಜಿಪಿಯಾಗಿರುವ ಅಲೋಕ್ ಮೋಹನ್ ಅವರು ತುರ್ತಾಗಿ ಭದ್ರತೆಯನ್ನು ಹೆಚ್ಚಿಸಿದ್ದಾರೆ. ಪ್ರತಿ ಬಾರಿ ದಸರಾಗೆ 1700 ರಿಂದ 2000 ಪೊಲೀಸರನ್ನ ನಿಯೋಜನೆ ಮಾಡಲಾಗಿತ್ತು.
ಆದರೇ ಈ ಬಾರಿ 3500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಇದಲ್ಲದೇ ರಾಜ್ಯದ ಎಲ್ಲಾ ವಲಯದ CID, ISDಯಿಂದಲೂ ಭದ್ರತೆ ನೀಡಲಾಗುತ್ತದೆ. ತುರ್ತಾಗಿ ಭದ್ರತೆಗೆ ಇಂದು ಬೆಳಿಗ್ಗೆ 9 ಗಂಟೆಗೆ ಮತ್ತೆ 1568 ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು, ಶ್ರೀರಂಗಪಟ್ಟಣ, KRS ಹಾಗೂ ಮೈಸೂರು ಪೊಲೀಸರಿಗೆ ಎಚ್ಚರಿಕಯಿಮದ ಇರುವಂತೆ ಕೇಂದ್ರ ಗುಪ್ರಚರ ಇಲಾಖೆಯಿಂದ ರಾಜ್ಯ ಪೊಲೀಸರಿಗೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ: ಕಾಲಜ್ಞಾನ ಪ್ರಕಾರ ಮೈಸೂರು ದಸರಾ ಹಬ್ಬಕ್ಕೆ ಕಂಟಕ!
ಸುಮಾರು 70 ಜನರು ನಕಲಿ ಪಾಸ್ ಪೋರ್ಟ್ ಪಡೆದು ಅಕ್ರಮವಾಗಿ ದೇಶಕ್ಕೆ ನುಸುಳಿರೋ ಕುರಿತು ಮಾಹಿತಿ ಲಭ್ಯವಾಗಿರುವ ಹಿನ್ನೆಲೆ, ಭದ್ರತೆಯನ್ನ ಹೆಚ್ಚಿಸಲಾಗಿದೆ. ಕೇಂದ್ರ ಗುಪ್ತಚರ ಇಲಾಖೆ ಹಾಗೂ ಡಿಜಿ ಸೂಚನೆ ಬೆನ್ನಲ್ಲೇ ಅಲರ್ಟ್ ಆದ ಮೈಸೂರು ಪೊಲೀಸರು, ಎಲ್ಲಾ ಲಾಡ್ಜ್, ಹೋಟೆಲ್, ಹೋಂ ಸ್ಟೇಗಳ ಮೇಲೆ ಹದ್ದಿನ ಕಣ್ಣನ್ನಿಟ್ಟಿದ್ದಾರೆ.