Wednesday, January 22, 2025

ಕೊನೇ ಕ್ಷಣದಲ್ಲಿ ಗಗನಯಾನ ಪರೀಕ್ಷಾರ್ಥ ಉಡಾವಣೆ ಸ್ಥಗಿತಗೊಳಿಸಿದ ಇಸ್ರೋ!

ಬೆಂಗಳೂರು: ಇಂದು ಉಡಾವಣೆಗೆ ಸಿದ್ದವಾಗಿದ್ದ ಗಗನಯಾನದ ಪರೀಕ್ಷಾರ್ಥ ತಾತ್ಕಾಲಿಕ ಮುಂದೂಡಿಕೆ ಮಾಡಲಾಗಿದೆ ಎಂದು ಇಸ್ರೋ ಅಧ್ಯಕ್ಷ ಸೋಮನಾಥನ್​ ಮಾಹಿತಿ ನೀಡಿದ್ದಾರೆ.

ಗಗನಯಾನದ ಪರೀಕ್ಷಾರ್ಥ ಉಡಾವಣೆಯೂ ಮೊದಲಿಗೆ ಬೆಳಗ್ಗೆ 8 ಗಂಟೆಗೆ ನಿಗದಿಯಾಗಿತ್ತು.  ನಂತರ ಹವಾಮಾನ ವೈಪರೀತ್ಯದ ಹಿನ್ನೆಲೆ ಬೆಳಗ್ಗೆ 8.30ಕ್ಕೆ ಉಡಾವಣೆ ಸಮಯ ಮುಂದೂಡಿಕೆ ಮಾಡಲಾಗಿತ್ತು ಬಳಿಕ ಕೊನೆಯ 5 ಸೆಕೆಂಡ್‌ಗೂ ಮುನ್ನ ನೌಕೆ ಉಡಾವಣೆ ಸ್ಥಗಿತಗೊಳಿಸಲಾಗಿದೆ.

ಇದನ್ನೂ ಓದಿ: ಗಗನಕ್ಕೇರಿದ ಧಾನ್ಯಗಳ ಬೆಲೆ: ಗ್ರಾಹಕರ ಜೇಬಿಗೆ ಕತ್ತರಿ!

ಈ ಕುರಿತು ಇಸ್ರೋ ಅಧ್ಯಕ್ಷ ಸೋಮನಾಥನ್‌ ಪ್ರತಿಕ್ರಿಯಿಸಿದ್ದು ಹವಾಮಾನ ವೈಪರೀತ್ಯ ಹಾಗು ಹಲವು ತಾಂತ್ರಿಕ ದೋಷದ ಪರಾಮರ್ಶೆ ನಡೆಯಬೇಕಿದೆ ಆದ್ದರಿಂದ ಸದ್ಯ ಈ ಗಗನಯಾನ ಶೀಘ್ರದಲ್ಲೇ ಉಡಾವಣೆ ದಿನಾಂಕವನ್ನ ತಿಳಿಸಲಾಗುತ್ತೆ ಎಂದು ಮಾಹಿತಿ ನೀಡಿದ್ದಾರೆ.

RELATED ARTICLES

Related Articles

TRENDING ARTICLES