Monday, August 25, 2025
Google search engine
HomeUncategorizedಮಳೆಗಾಗಿ ಕತ್ತೆ ಮದುವೆ ಮಾಡಿಸಿದ ಗ್ರಾಮಸ್ಥರು

ಮಳೆಗಾಗಿ ಕತ್ತೆ ಮದುವೆ ಮಾಡಿಸಿದ ಗ್ರಾಮಸ್ಥರು

ವಿಜಯಪುರ : ಮಳೆಗಾಗಿ ಕತ್ತೆಯ ಮದುವೆ ಮಾಡಿಸಿ ಗ್ರಾಮಸ್ಥರು ಪ್ರಾರ್ಥಿಸಿರುವ ಘಟನೆ ವಿಜಯಪುರ ತಾಲೂಕಿನ ಹಿಟ್ಟಿನಹಳ್ಳಿ ಗ್ರಾಮದಲ್ಲಿ ನಡೆದಿದೆ. ವಾದ್ಯಗಳೊಂದಿಗೆ ಊರೆಲ್ಲಾ ಮೆರವಣಿಗೆ ಮಾಡಿಸಿ ಗ್ರಾಮಸ್ಥರು ಕತ್ತೆಗಳ ಮದುವೆ ಮಾಡಿಸಿದ್ದಾರೆ.

ಊರಿನ ದೇವರುಗಳಿಗೆ ಭೇಟಿ ಮಾಡಿಸಿ ಕಾಲು ಹಿಡಿದು ಗ್ರಾಮಸ್ಥರು ನಮಸ್ಕರಿಸಿದ್ದಾರೆ. ಶ್ರೀ ಬೀರೇಶ್ವರ ದೇವಸ್ಥಾನ ವತಿಯಿಂದ ಕತ್ತೆಗಳಿಗೆ ಮದುವೆ ಮಾಡಲಾಗಿದೆ. ಕತ್ತೆಯ ಕಾಲು ಹಿಡಿದು ನಮಸ್ಕರಿಸಿ ಮಳೆರಾಯನಿಗಾಗಿ ಪ್ರಾರ್ಥನೆ ಮಾಡಿದ್ದಾರೆ. ಎಲ್ಲರನ್ನು ಸುಖವಾಗಿ ಇಡು ವರುಣದೇವ ಎಂದು ಗ್ರಾಮಸ್ಥರು ಬೇಡಿಕೊಂಡಿದ್ದಾರೆ.

ಇಂದಿನಿಂದ ಮತಷ್ಟು ಕಾವೇರಿ ಹೋರಾಟ ತೀವ್ರಗೊಂಡಿದೆ. ಕಾವೇರಿಗಾಗಿ ರೈತರು ರಸ್ತೆಗಿಳಿದಿದ್ದಾರೆ. ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಹಿನ್ನಲೆ ಮಂಡ್ಯದಲ್ಲಿ ರಸ್ತೆಗಿಳಿದು ರೈತರು ಬೃಹತ್​​​ ಹೋರಾಟ ನಡೆಸಿದ್ದಾರೆ. ಎತ್ತಿನಗಾಡಿ, ಟ್ರ್ಯಾಕ್ಟರ್, ಲಾರಿ, ಹಾಗೂ ಬೃಹತ್ ಬೈಕ್ ರ್ಯಾಲಿ ನಡೆಸಿದ್ದಾರೆ. ಮಂಡ್ಯದ ಇಂಡವಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜನರು ಬೃಹತ್ ಪ್ರತಿಭಟನೆ ಮಾಡಿದ್ದಾರೆ.

ರಸ್ತೆಗಿಳಿದು ರೈತರ ಹೋರಾಟ

ಸಂಜಯ್ ವೃತ್ತದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿ ತಡೆದು ರೈತರು ಪ್ರತಿಭಟನೆ ನಡೆಸಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಹೆದ್ದಾರಿ ತಡೆಯಿಂದ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ರೈತರು ತಮಿಳುನಾಡಿಗೆ ನೀರು ಬಿಟ್ಟ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments