Thursday, December 19, 2024

ಅಧಿಕಾರಿಗಳಿಗೆ ರೈತರಿಂದ ಚಪ್ಪಲಿಯಲ್ಲಿ ಹೊಡೆಸ್ತೀನಿ ಎಂದ ಶಾಸಕ!

ರಾಯಚೂರು: ರೈತರಿಗೆ ನೀರೊದಿಗಿಸುವಲ್ಲಿ ವಿಫಲರಾದ ಜಿಲ್ಲೆಯ ನೀರಾವರಿ ಅಧಿಕಾರಿಗಳನ್ನು ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್​ ಅವಾಚ್ಯ ಶಬ್ದಗಳಿಂದ ಏಕವಚನದಲ್ಲಿ ನಿಂದಿಸಿರುವ ಘಟನೆ ನಡೆದಿದೆ.

ತುಂಗಭದ್ರ ಎಡದಂಡೆ ಕಾಲುವೆ ಸಿರವಾರ ವಿಭಾಗದ ಇಇ ಸತ್ಯನಾರಾಯಣ ಶೆಟ್ಟಿ , ಎಇಇ ವಿಜಯಲಕ್ಷ್ಮಿ ಪಾಟೀಲ್ ಅವರನ್ನು ತರಾಟೆಗೆ ತೆಗೆದುಕೊಂಡ ಶಾಸಕ ದದ್ದಲ್, ರೈತರಿಗೆ ನೀರು ಪೂರೈಕೆ ಮಾಡದೇ ಏನು ಮಾಡುತ್ತಿದ್ದೀರಿ, ಸೂ…ಮಗನೆ, ರೈತರಿಂದ ನಿಮಗೆ ಚಪ್ಪಲಿಯಿಂದ ಹೊಡೆಸುತ್ತೇನೆ ಬನ್ನಿ ನೀವು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮಾಜಿ ಸಿಎಂ ಬೊಮ್ಮಾಯಿಗೆ ಓಪನ್ ಹಾರ್ಟ್​ ಸರ್ಜರಿ ಇಂದು ವಾರ್ಡ್​ ಗೆ ಶಿಫ್ಟ್​ !

ಹಲವು ತಿಂಗಳುಗಳಿಂದ 7 ಕಡೆ ಡಿಸ್ಟ್ರಿಬೂಟರ್ ಗೇಟ್ ಮುರಿದ್ದಿದ್ದರೂ ಅಧಿಕಾರಿಗಳು ದುರಸ್ಥಿ ಮಾಡಿಲ್ಲ ಇದರಿಂದ TLBC ಕೊನೆ ಭಾಗದ ರೈತರಿಗೆ ನೀರು ತಲುಪದೇ ರೈತರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ನೀರಾವರಿ ಅಧಿಕಾರಿಗಳು ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಿದ್ದರಿಂದ ಶಾಸಕ ದದ್ದಲ್​ ಕೆಂಡಾಮಂಡಲರಾದರು.

RELATED ARTICLES

Related Articles

TRENDING ARTICLES