Monday, December 23, 2024

ರಸ್ತೆ ಬದಿ ದೋಸೆ ಹಾಕಿ ಗಮನ ಸೆಳೆದ ರಾಹುಲ್ ಗಾಂಧಿ

ಬೆಂಗಳೂರು : ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ತೆಲಂಗಾಣದ ಜಗ್ತಿಯಾಲ್ ಜಿಲ್ಲೆಯ ರಸ್ತೆ ಬದಿಯ ಅಂಗಡಿಯಲ್ಲಿ ದೋಸೆ ಹಾಕಿ ಗಮನ ಸೆಳೆದಿದ್ದಾರೆ.

ತೆಲಂಗಾಣದಲ್ಲಿ ವಿಧಾನಸಭಾ ಚುನಾವಣೆ ಕಾವು ರಂಗೇರುತ್ತಿದೆ. ಮತ್ತೊಂದೆಡೆ ರಾಹುಲ್ ಗಾಂಧಿ ಕಾಂಗ್ರೆಸ್​ ಅಭ್ಯರ್ಥಿಗಳ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ.

ರಸ್ತೆ ಬದಿ ದೋಸೆ ಹಾಕಿದ್ದಲ್ಲದೆ ಅಲ್ಲಿ ಕುಳಿತವರ ಜೊತೆಯಲ್ಲಿ ದೋಸೆ ಸವಿದಿದ್ದಾರೆ. ತನ್ನ ಕೈಯಿಂದ ಮಾಡಿದ ದೋಸೆಯನ್ನು ಇತರರಿಗೂ ತಿನ್ನಿಸಿದರು. ಈ ವೇಳೆ ರಾಹುಲ್ ಗಾಂಧಿ ರಸ್ತೆ ಬದಿ ವ್ಯಾಪಾರಿಗಳ (ದೋಸೆ ವ್ಯಾಪಾರಿಗಳು) ಜೊತೆ ಮಾತನಾಡಿ ಅವರ ಸಮಸ್ಯೆಗಳನ್ನು ಆಲಿಸಿದರು.

ಈ ವೇಳೆ ಮಾತನಾಡಿರುವ ರಾಹುಲ್ ಗಾಂಧಿ, ತೆಲಂಗಾಣದಲ್ಲಿ ಬಿಜೆಪಿ ನಾಯಕರಿಗೆ ಆತಂಕ ಎದುರಾಗಿದೆ. ಅವರು ನಮ್ಮನ್ನು ಕಾಂಗ್ರೆಸ್‌ ಪಕ್ಷಕ್ಕೆ ಸೇರಿಸಿಕೊಳ್ಳಿ ಎಂದು ಕರೆ ಮಾಡಿ ಹೇಳುತ್ತಿದ್ದಾರೆ. ನಾವು ಹೇಳುತ್ತೇವೆ ಅದು ಸಾಧ್ಯವಿಲ್ಲ ಅಂತ ಎಂದು ಕುಟುಕಿದರು.

RELATED ARTICLES

Related Articles

TRENDING ARTICLES