Wednesday, January 22, 2025

ತನ್ನ ಹಸುಗೂಸು ಗಂಡು ಮಗುವನ್ನು ಕೊಂದು ಕೆರೆಗೆ ಎಸೆದ ಪಾಪಿ ತಂದೆ!

ಮೈಸೂರು : ತಂದೆಯೊಬ್ಬ ತನ್ನ ಮಗನನ್ನೇ ಕೊಂದು ಕೆರೆಗೆ ಎಸೆದು ಹೋಗಿರುವ ಅಮಾನವೀಯ ಘಟನೆ ಪಿರಿಯಾಪಟ್ಟಣ ತಾಲೂಕು ಮಾಕೋಡು ಗ್ರಾಮದಲ್ಲಿ ನಡೆದಿದೆ.

ಗಣೇಶ್​, ಕೆರೆಗೆ ಎಸೆದು ಹಸುಗೂಸನ್ನು ಕೊಂದ ಪಾಪಿ ತಂದೆ. ಇತ್ತೀಚೆಗೆ ಗಣೇಶ್​ ಪತ್ನಿ ಲಕ್ಷ್ಮಿ ಮೂರನೇ ಮಗು ಹೆರಿಗೆ ವೇಳೆ ಸಾವನ್ನಪ್ಪಿದ್ದರು. ಬಳಿಕ, ಬೆಂಗಳೂರಿನ ದೊಡ್ಡಸನ್ನೇ ಗ್ರಾಮದಲ್ಲಿ ವಾಸವಾಗಿದ್ದ ಈತ ತನ್ನ ತಾಯಿಯ ಮನೆಗೆ ವಾಪಾಸಾಗಿದ್ದ, ತನ್ನ ಮೂರು ಮಕ್ಕಳನ್ನು ಪತ್ನಿ ಲಕ್ಷ್ಮಿ ತಾಯಿಯಾದ ಅಂಜನಮ್ಮ ಕರೆದುಕೊಂಡು ಹೋಗಿ ನೋಡಿಕೊಳ್ಳುತ್ತಿದ್ದರು.

ಇದನ್ನೂ ಓದಿ: ಡಿಸಿಎಂ ಡಿಕೆಶಿ ಗೆ ಮತ್ತೆ ಸಂಕಷ್ಟ: ಅರ್ಜಿ ವಜಾಗೊಳಿಸಿದ ಹೈಕೋರ್ಟ್​!

ಕೆಲ ದಿನಗಳ ಹಿಂದೆ ಗಣೇಶ್​ ತನ್ನ ಅತ್ತೆ ಅಂಜನಮ್ಮ ಬಳಿಯಿಂದ ತನ್ನ ಮೂವರು ಮಕ್ಕಳ ಪೈಕಿ ಗಂಡು ಮಗುವನ್ನು ತಂದು ತನ್ನ ತಾಯಿಯ ಮನೆಯಲ್ಲಿ ವಾಸವಾಗಿದ್ದ ಈ ನಡುವೆ ತನ್ನ ತಾಯಿಯ ಜೊತೆ ಜಗಳವಾಡಿಕೊಂಡು ಅಲ್ಲಿಂದ ಮಗುವನ್ನು ತೆಗೆದುಕೊಂಡು ಹೋಗಿದ್ದ ಈತ ಬಳಿಕ ಕೊಲೆಗೈದು ಮಗುವನ್ನು ಕೆರೆಯಲ್ಲಿ ಬಿಸಾಡಿ ಹೋಗಿದ್ದಾನೆ.

ವಿಚಾರ ತಿಳಿದ ಅತ್ತೆ ಅಂಜಿನಮ್ಮ ಪಿರಿಯಾಪಟ್ಟಣ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES