Wednesday, January 22, 2025

ಸಿಎಂ ಇಬ್ರಾಹಿಂಗೆ ಪದಚ್ಯುತಿ ಭಾಗ್ಯ?

ಬೆಂಗಳೂರು : ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ದಳಪತಿಗಳ ವಿರುದ್ಧ ರೆಬೆಲ್​ ಆಗಿದ್ದು, ಇಬ್ರಾಹಿಂ ರಾಜ್ಯಾಧ್ಯಕ್ಷ ಸ್ಥಾನದ ಭವಿಷ್ಯದ ಚಂಡು JDS ವರಿಷ್ಠ H.D.ದೇವೇಗೌಡ ಅವರ ಅಂಗಳ ತಲುಪಿದೆ.

ಇಬ್ರಾಹಿಂ ವಿರುದ್ಧ ಪ್ರಯೋಗಿಸಲು ದಳಪತಿಗಳು ಹೊಸ ಅಸ್ತ್ರಗಳನ್ನು ರೆಡಿಮಾಡಿಕೊಂಡಿದ್ದಾರೆ. ಜೆಡಿಎಸ್ ಪಕ್ಷ ನನ್ನದು ಎಂದು ಇಬ್ರಾಹಿಂ ಘೋಷಣೆ ಮಾಡಿದ್ದು, ಜೆಡಿಎಸ್​ ಮತ್ತು NDA ನಡುವೆ ಮೈತ್ರಿ ಇಲ್ಲವೆಂದು ಹೇಳಿದ್ದಾರೆ.

ಇದನ್ನೂ ಓದಿ: ಫುಟ್​ಪಾತ್​ ಮೇಲೆ ನುಗ್ಗಿದ ಕಾರು, ಓರ್ವ ಯುವತಿ ಸಾವು!

ಈ ಹಿನ್ನೆಲೆ ರಾಜ್ಯಾಧ್ಯಕ್ಷರ ವಿರುದ್ಧ ಕ್ರಮ ತೆಗೆದುಕೊಳ್ಳಲು JDS ರಾಷ್ಟೀಯ ಅಧ್ಯಕ್ಷ HDDಗೆ ಮಾತ್ರ ಅವಕಾಶವಿದೆ. ರಾಜ್ಯಾಧ್ಯಕ್ಷ ಸ್ಥಾನದಿಂದ ಪದಚ್ಯತಿಗೊಳಿಸಲು ದಳಪತಿಗಳು ಸಜ್ಜಾಗಿದ್ದಾರೆ ಎನ್ನಲಾಗಿದ್ದು ಇದಕ್ಕೆ ಬೇಕಾದ ಪ್ಲ್ಯಾನ್​ ರೂಪಿಸಿಕೊಂಡಿದ್ದಾರೆ. 3ನೇ 2 ಭಾಗದ ನಿರ್ಣಯ ತೆಗೆದುಕೊಂಡರೆ ಮಾತ್ರವೇ ಪದಚ್ಯುತಿಗೆ ಅವಕಾಶವಿದೆ.

RELATED ARTICLES

Related Articles

TRENDING ARTICLES