ಬೆಂಗಳೂರು : ಕಾಂಗ್ರೆಸ್ ಎಂದರೆ ದರಿದ್ರದ ಸಂಕೇತ. ಇಡೀ ನಾಡಿಗೆ ಶಾಪ. ಅವರಿಗೆ ಬರೋ ಶಾಪ ರಾಜ್ಯಕ್ಕೆ ಬಂದಿದೆ. ಸಿಎಂ ಸಿದ್ದರಾಮಯ್ಯ ಬಡವರ ರಕ್ತ ಹೀರುತ್ತಿದ್ದಾರೆ ಎಂದು ಮಾಜಿ ಡಿಸಿಎಂ ಡಾ.ಸಿ.ಎನ್ ಅಶ್ವತ್ಥ ನಾರಾಯಣ್ ಕುಟುಕಿದರು.
ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಐಸಿ ದಾಳಿ ವೇಳೆ ಕೋಟಿ ಕೋಟಿ ಹಣ ಸಿಕ್ಕಿದೆ, ಈ ಬಗ್ಗೆ ತನಿಖೆಯಾಗಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜವಾಬ್ದಾರಿ ಹೊತ್ತುಕೊಳ್ಳಬೇಕು. ಸಿಬಿಐ ತನಿಖೆಯಾಗಬೇಕು. ಯಾರದ್ದು ಹಣ ಅಂತ ಜನರಿಗೆ ಗೊತ್ತಾಗಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಆಡಳಿತ ಎಡವಟ್ಟು ಮಾಡ್ತಿದೆ. ಆಡಳಿತ ನಡೆಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಜನರ ಆಶೀರ್ವಾದಕ್ಕೆ ವಿರುದ್ಧವಾಗಿ ನಾಮಕವಾಸ್ತೆಗೆ ಉಚಿತ ಭಾಗ್ಯಗಳನ್ನು ತೋರಿಸ್ತಿದ್ದಾರೆ. ನಾವು ಬಂದಿರೋದು ರಾಜ್ಯವನ್ನ ಲೂಟಿ ಮಾಡಲಿಕ್ಕೆ, ಇಂತಹ ಅವಕಾಶ ಬಿಡೊಲ್ಲ ಅಂತಾ ಪ್ರತಿಯೊಂದು ವಿಚಾರದಲ್ಲೂ ತೊರಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಪಂಚೆ ಎತ್ಕೊಂಡು ಪೇ ಸಿಎಂ ಮಾಡಿದ್ದೇ ಮಾಡಿದ್ದು
ಕಾಂಗ್ರೆಸ್ ಸರ್ಕಾರ ಲೂಟಿಯಲ್ಲಿ ತೊಡಗಿದೆ. ಬ್ಯುಲ್ಡರ್ಗಳಿಂದ, ಅಧಿಕಾರಿಗಳಿಂದ ಹಣ ಪಡೆಯುತ್ತಿದ್ದಾರೆ. ಹಣ ಪಡೆದೆ ಕೆಲಸ ಮಾಡೋದು ಅಂತ ತೋರಿಸ್ತಿದ್ದಾರೆ. 92 ಕೋಟಿ ಸಿಕ್ಕಿರೋದು ಮೇಲ್ನೋಟಕ್ಕೆ ಮಾತ್ರ. ಸಾವಿರಾರು ಕೋಟಿ ಲೂಟಿ ಮಾಡಿದ್ದಾರೆ. ಅವರೆಲ್ಲಾ ಬಿಜೆಪಿ ಗುತ್ತಿಗರದಾರರು ಅಂತಾರೆ, ಹಾಗಾದ್ರೆ ಸಿಬಿಐಗೆ ವಹಿಸಿ. ಅದು ಯಾರ ಹಣ ಅಂತ ತಿಳಿಸೋದಕ್ಕೆ ಸಿಎಂಗೆ ಶಕ್ತಿ ಇಲ್ಲ. ಪಂಚೆ ಎತ್ತುಕೊಂಡು 40% ಪೇ ಸಿಎಂ ಮಾಡಿದ್ದೇ ಮಾಡಿದ್ದು. ಇವತ್ತು ಎಲ್ಲಿದೆ ನೈತಿಕತೆ ನಿಮಗೆ? ಎಂದು ಅಶ್ವತ್ಥ ನಾರಾಯಣ್ ಪ್ರಶ್ನೆ ಮಾಡಿದರು.