Sunday, January 19, 2025

ವಿಶ್ವಕಪ್​ 2023: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾಳೆಯಿಂದ ಟಿಕೆಟ್ ಮಾರಾಟ ಆರಂಭ!

ಬೆಂಗಳೂರು: ನಗರದ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಪಂದ್ಯಗಳ ಟಿಕೆಟ್ ಮಾರಾಟ ಅ.17 ರಂದು ಆರಂಭವಾಗಲಿದೆ.

ನ.12 ರಂದು ನಡೆಯಲಿರುವ ಭಾರತ ನೆದರ್ಲೆಂಡ್ಸ್ ನಡುವಣ ಪಂದ್ಯ ಹೊರತುಪಡಿಸಿ ಇತರ ನಾಲ್ಕು ಪಂದ್ಯಗಳ ಟಿಕೆಟ್ ಮಾರಾಟದ ದಿನಾಂಕ ಹಾಗೂ ಟಿಕೆಟ್‌ ದರದ ವಿವರಗಳನ್ನು ಕೆಎಸ್‌ಸಿಎ ಭಾನುವಾರ ಪ್ರಕಟಿಸಿದೆ. ಅ.17, 18 ಮತ್ತು 19 ರಂದು ಬೆಳಿಗ್ಗೆ 10 ರಿಂದ ಸಂಜೆ 5ರ ವರೆಗೆ ಕೌಂಟರ್‌ಗಳು ತೆರೆದಿರಲಿವೆ.

ಇದನ್ನೂ ಓದಿ: ಆಂಗ್ಲರಿಗೆ ಮುಖಭಂಗ : ಇಂಗ್ಲೆಂಡ್ ವಿರುದ್ಧ ಅಫ್ಘಾನಿಸ್ತಾನಕ್ಕೆ ಅಮೋಘ ಗೆಲುವು

ಕ್ರೀಡಾಂಗಣದ ಗೇಟ್ ಸಂಖ್ಯೆ 2 ಮತ್ತು 4 ಹಾಗೂ ಗೇಟ್ ಸಂಖ್ಯೆ 16 ಮತ್ತು 18ರಲ್ಲಿ ತೆರೆಯಲಾಗುವ ಕೌಂಟರ್‌ಗಳಲ್ಲಿ ಟಿಕೆಟ್‌ಗಳನ್ನು ಖರೀದಿಸಬಹುದು. ಒಬ್ಬರಿಗೆ ಗರಿಷ್ಠ ಎರಡು ಟಿಕೆಟ್‌ಗಳನ್ನು ಮಾತ್ರ ಖರೀದಿಸಬಹುದು.

ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಇಲ್ಲವೇ ಯುಪಿಐ ಪಾವತಿಗೆ ಮಾತ್ರ ಅವಕಾಶವಿದ್ದು, ನಗದು ಸ್ವೀಕರಿಸುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ. ವಿವಿಧ ಗ್ಯಾಲರಿಗಳ ಟಿಕೆಟ್‌ ದರವನ್ನು ಕನಿಷ್ಟ 750ರಿಂದ ಗರಿಷ್ಟ 25 ಸಾವಿರದವರೆಗೆ ನಿಗದಿಪಡಿಸಲಾಗಿದೆ.

RELATED ARTICLES

Related Articles

TRENDING ARTICLES