ಬೆಂಗಳೂರು: ಬಾಹ್ಯಾಕಾಶ ಸಂಶೋಧನೆ ಯಲ್ಲಿ ಜಗತ್ತಿನಲ್ಲೇ ಮುಂಚೂಣಿಯಲ್ಲಿರುವ ಅಮೆರಿಕದ ವಿಜ್ಞಾನಿಗಳೇ ಈಗ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರದಿಂದ ಬಾಹ್ಯಾಕಾಶ ತಂತ್ರಜ್ಞಾನವನ್ನು ಕೇಳುತ್ತಿದ್ದಾರೆ ಎಂಬ ಕುತೂಹಲಕರ ಸಂಗತಿಯನ್ನು ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್ ಬಹಿರಂಗಪಡಿಸಿದ್ದಾರೆ.
ಕಾಲ ಬದಲಾಗಿದೆ. ಭಾರತವೀಗ ಉತ್ಕೃಷ್ಟ ಬಾಹ್ಯಾಕಾಶ ಉಪಕರಣಗಳು ಹಾಗೂ ರಾಕೆಟ್‌ಗಳನ್ನು ಉತ್ಪಾದಿಸುತ್ತಿದೆ. ಅವುಗಳ ಗುಣಮಟ್ಟ ಹಾಗೂ ಅತಿ ಕಡಿಮೆ ವೆಚ್ಚವನ್ನು ನೋಡಿದ ಅಮೆರಿಕದ ಬಾಹ್ಯಾಕಾಶ ವಿಜ್ಞಾನಿಗಳು ಈಗ ಭಾರತದಿಂದ ಬಾಹ್ಯಾಕಾಶ ತಂತ್ರಜ್ಞಾನವನ್ನು ಕೇಳುತ್ತಿದ್ದಾರೆ.
ಇದನ್ನೂ ಓದಿ: ವಿಶ್ವಕಪ್ 2023: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾಳೆಯಿಂದ ಟಿಕೆಟ್ ಮಾರಾಟ ಆರಂಭ!
ಈ ಕಾರಣಕ್ಕಾಗಿಯೇ ಪ್ರಧಾನಿ ನರೇಂದ್ರ ಮೋದಿ ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿ ಕಂಪನಿಗಳಿಗೂ ತೆರೆದಿದ್ದಾರೆ ಎಂದು ಸೋಮನಾಥ್ ತಿಳಿಸಿದ್ದಾರೆ.