Saturday, December 28, 2024

ಹಾಡುಹಗಲೇ ಕುರಿ ಕಳ್ಳತನ: ಕಳ್ಳರನ್ನು ಹಿಡಿದು ಥಳಿಸಿದ ಗ್ರಾಮಸ್ಥರು!

ಮಂಡ್ಯ : ಹಾಡು ಹಗಲೇ ಕುರಿಕಳ್ಳತನಕ್ಕೆ ಬಂದ ಕಳ್ಳರನ್ನು ಹಿಡಿದು ಗೂಸಕೊಟ್ಟು ಯುವಕರು ಕಳ್ಳರನ್ನು ಪೊಲೀಸರಿಗೆ ಒಪ್ಪಿಸಿರುವ ಘಟನೆ ಮತ್ತಿಕೆರೆಯಲ್ಲಿ ನಡೆದಿದೆ.

ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ ಹೋಬಳಿಯ ಮತ್ತಿಕೆರೆ ಗ್ರಾಮದ ಕೆರೆಯಲ್ಲಿ ಮಂದೇ ಕುರಿ ಮೇಯಿಸುತ್ತಿದ್ದ ವೇಳೆ ಬೈಕಿನಲ್ಲಿ ಬಂದ ಕಳ್ಳರಿಬ್ಬರು ಕುರಿಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಲು ಯತ್ನಿಸಿದ್ದಾರೆ, ಈ ವೇಳೆ ಬೈಕ್​ ಹಿಂಬಾಲಿಸಿ ಬಂದ ಗ್ರಾಮದ ಯುವಕರು ಕಳ್ಳರನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಇದನ್ನೂ ಓದಿ: ಗಂಡನ ವಿಚಿತ್ರ ಬೇಡಿಕೆ: ಪತ್ನಿ ಠಾಣೆಗೆ ದೂರು !

ಸ್ಥಳಕ್ಕೆ ಆಗಮಿಸಿದ ಪೊಲೀಸರಿಂದ ಪರಿಶೀಲನೆ ನಡೆಸಿದ್ದು ಕುರಿ ಕಳ್ಳತನ ಮಾಡುತ್ತಿದ್ದ ಕಳ್ಳರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಈ ವೇಳೆ ಕಳ್ಳರು ಪಾಂಡುವಪುರದ ಕಣಿವೆ ಕೊಪ್ಪಲು ಗ್ರಾಮದವರು ಎಂದು ತಿಳಿದು ಬಂದಿದೆ. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

RELATED ARTICLES

Related Articles

TRENDING ARTICLES