Thursday, January 23, 2025

ಜನಾರ್ಧನ ರೆಡ್ಡಿ ಕುಟುಂಬದ ಗನ್ ಮ್ಯಾನ್ ಪಿಸ್ತೂಲ್ ಕಳವು!

ಬಳ್ಳಾರಿ : ಜನಾರ್ಧನ ರೆಡ್ಡಿ ಕುಟುಂಬದ ಗನ್ ಮ್ಯಾನ್ ಪಿಸ್ತೂಲ್ ಕಳವಾಗಿರುವ ಘಟನೆ ಕೌಲ್​ ಬಜಾರ್​ ಠಾಣಾ ವ್ಯಾಪ್ತಿಯ ಈರನಗೌಡ ಕಾಲೋನಿಯಲ್ಲಿ ನಡೆದಿದೆ.

ಉತ್ತರ ಪ್ರದೇಶದ ಬಾಲಾ ಮುಕುಂದ ಶುಕ್ಲಾಗೆ ಸೇರಿದ ಪಿಸ್ತೂಲ್ ಇದಾಗಿದೆ, ಜನಾರ್ಧನ್ ರೆಡ್ಡಿ ಪತ್ನಿ ಹಾಗು ಮಗನ ಗನ್​ ಮ್ಯಾನ್​ ಆಗಿ ಕಳೆದ ಎರಡು ವರ್ಷಗಳಿಂದ ಗನ್​ ಮೆನ್​ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ, ಸೆಪ್ಟೆಂಬರ್​ 28 ರಂದು ಭದ್ರತಾ ಸಿಬ್ಬಂದಿ ರೂಂನಲ್ಲಿ ಇಟ್ಟು ಬಾಲಾ ಮುಕುಂದ್​ ಶುಕ್ಲ ಮಲಗಿದ್ದಾಗ ಪಿಸ್ತೂಲ್​ ಕಳುವಾಗಿದೆ. ಮುಖ್ಯದ್ವಾರವನ್ನು ಲಾಕ್​ ಮಾಡಿ ಸೈಡ್​ ಬಾಗಿಲು ಲಾಕ್​ ಮಾಡದೇ ಇದ್ದದ್ದೇ ಘಟನೆಗೆ ಕಾರಣ ಎನ್ನಲಾಗುತ್ತಿದೆ.

ಇದನ್ನೂ ಓದಿ: ಅಂಬಿಕಾಪತಿ ಪರ ಬ್ಯಾಟ್​ ಬೀಸಿದ ಶಾಸಕ ಶಿವಲಿಂಗೇಗೌಡ!

ಬಳಿಕ ಘಟನೆ ಸಂಬಂಧ ಕೌಲ್ ಬಜಾರ್ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಿಸಿ ಕ್ಯಾಮರಾ ಮೂಲಕ ಆರೋಪಿಗಳ ಪತ್ತೆಗಾಗಿ ಹುಡುಕಾಟ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES