Monday, December 23, 2024

ಪಿಸ್ತೂಲ್ ತೋರಿಸಿ ದರೋಡೆಗೆ ಯತ್ನ!

ಬೆಳಗಾವಿ : ಇಬ್ಬರು ದುಷ್ಕರ್ಮಿಗಳು ಹಾಡ ಹಗಲೇ ಪಿಸ್ತೂಲ್ ತೋರಿಸಿ ದರೋಡೆಗೆ ಯತ್ನಿಸಿರುವ ಘಟನೆ  ಬೆಳಗಾವಿಯ ಶಾಹುನಗರದಲ್ಲಿರುವ ಸಂತೋಷಿ ಜ್ಯುವೆಲ್ಲರ್ಸ್​​ನಲ್ಲಿ ನಡೆದಿದೆ.

ಜ್ಯುವೆಲ್ಲರಿ ಶಾಪ್​ಗೆ ನುಗ್ಗಿದ ಇಬ್ಬರು ಅನಾಮಿಕರು ಅಂಗಡಿ ಮಾಲೀಕ ಪ್ರಶಾಂತ್​​ಗೆ ಪಿಸ್ತೂಲ್ ತೋರಿಸಿ ದರೋಡೆಗೆ ಯತ್ನಿಸಿದ್ದಾರೆ. ಇದಕ್ಕೂ ಜಗ್ಗದ ಪ್ರಶಾಂತ್ ಜೊತೆ ಫೈಟ್ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ.

ಇದನ್ನೂ ಓದಿ: ಜನಾರ್ಧನ ರೆಡ್ಡಿ ಕುಟುಂಬದ ಗನ್ ಮ್ಯಾನ್ ಪಿಸ್ತೂಲ್ ಕಳವು!

ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಸಿದ್ರಾಮಪ್ಪ ಭೇಟಿ ನೀಡಿ ಪರಿಶೀಲನೆ ನಡಸಿದ್ದಾರೆ. ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

RELATED ARTICLES

Related Articles

TRENDING ARTICLES