Wednesday, January 22, 2025

ರಾಮನಗರದಲ್ಲಿ ರೌಡಿ ಶೀಟರ್​ನ ಬರ್ಬರ ಹತ್ಯೆ!

ರಾಮನಗರ: ತಾಲೂಕಿನ ಕೆರೆಮೇಗಳ ದೊಡ್ಡಿ ಗ್ರಾಮದಲ್ಲಿ ರೌಡಿ ಶೀಟರ್​ನ ಬರ್ಬರ ಹತ್ಯೆಯಾಗಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.

ಲೋಕೇಶ್​​ (38) ಕೊಲೆಗೀಡಾದ ರೌಡಿ ಶೀಟರ್.​​ ಈತ ತಾಲೂಕಿನ ಕೆರೆಮೇಗಳ ದೊಡ್ಡಿ ಗ್ರಾಮದವನಾಗಿದ್ದು, ಕಳೆದ ರಾತ್ರಿ ದುಷ್ಕರ್ಮಿಗಳು ಲಾಂಗ್​ನಿಂದ ಕೊಚ್ಚಿ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ. ಸ್ನೇಹಿತರ ಜೊತೆ ಮದ್ಯ ಕುಡಿಯಲು ಹೋಗಿದ್ದ ವೇಳೆ ದುಷ್ಕರ್ಮಿಗಳು ಕೊಲೆ ಮಾಡಿರಬಹುದೆಂದು ಶಂಕಿಸಲಾಗಿದೆ.

ಇದನ್ನೂ ಓದಿ: ಲೋಕಾಯುಕ್ತ ಬಲೆಗೆ ಬಿದ್ದ ನಾಲ್ವರು ಅಬಕಾರಿ ಇಲಾಖೆ ಅಧಿಕಾರಿಗಳು!

ಸ್ನೇಹಿತರೊಂದಿಗೆ ಹೋದ ಸಂದರ್ಭದಲ್ಲಿ ಹಣಕಾಸಿನ ವಿಚಾರಕ್ಕೆ ಕೊಲೆ ಆಗಿರಬಹುದೆಂದು ಅನುಮಾನಿಸಲಾಗಿದೆ. ಕೂಡಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಎಸ್ಪಿ ಕಾರ್ತಿಕ್ ರೆಡ್ಡಿ ತಿಳಿಸಿದ್ದಾರೆ.

ಇನ್ನು, ಘಟನಾ ಸ್ಥಳಕ್ಕೆ ಎಎಸ್ಪಿ ಸುರೇಶ್, ಡಿವೈಎಸ್ಪಿ ದಿನಕರ್ ಶೆಟ್ಟಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.

RELATED ARTICLES

Related Articles

TRENDING ARTICLES