ಮೈಸೂರು : ದಸರಾ ಮಹೋತ್ಸವಕ್ಕೆ ರೈಲ್ವೆ ಇಲಾಖೆ ವತಿಯಿಂದ ಪ್ರಯಾಣಿಕರ ಅನುಕೂಲಕ್ಕಾಗಿ ವಿಶೇಷ ರೈಲು ಸಂಚಾರ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಪ್ರಯಾಣಿಕರ ಒತ್ತಾಯದ ಮೇರೆಗೆ ವಿಶ್ವಪ್ರಸಿದ್ದ ಮೈಸೂರು ದಸರಾ ವೀಕ್ಷಣೆಗೆ ಹೊರ ರಾಜ್ಯಗಳಿಂದ ಯಾತ್ರಿಕರು ಬರುವ ಸಾಧ್ಯತೆ ಇದ್ದು ನೈಋತ್ಯ ರೈಲ್ವೆ ವಲಯದಿಂದ ವಿಶೇಷ ರೈಲು ಬಿಡುಗಡೆ ಮಾಡಲಾಗಿದೆ. ಈ ರೈಲು ಮೈಸೂರು ಮತ್ತು ಬೆಂಗಳೂರು ನಡುವೆ ನಾಲ್ಕು ರೈಲುಗಳ ಸಂಚಾರ ನಡೆಸಲಿದೆ.
ಇದನ್ನೂ ಓದಿ: ಮೈಸೂರು ದಸರಾ ಮಹೋತ್ಸವಕ್ಕೆ ಇಂದು ಚಾಲನೆ!
ಮೈಸೂರು – ಕೆಎಸ್‌ಆರ್ (KSR) ಬೆಂಗಳೂರು ಮಧ್ಯೆ 06279 ಸಂಖ್ಯೆಯ ವಿಶೇಷ ರೈಲು ಸೇವೆ ಅಕ್ಟೋಬರ್ 20, 21, 22 , 23 ಹಾಗೂ 24 ರಂದು ಓಡಾಟ ನಡೆಯಲಿದೆ, ರಾತ್ರಿ 11.15 ಕ್ಕೆ ಮೈಸೂರಿನಿಂದ ಹೊರಟು ಮರುದಿನ ರಾತ್ರಿ 2.30 ಗಂಟೆಗೆ ಬೆಂಗಳೂರು ತಲುಪಲಿದೆ.
ಇನ್ನೂ ರೈಲು ಸಂಖ್ಯೆ 06280 ಕೆಎಸ್‌ಆರ್ ಬೆಂಗಳೂರು – ಮೈಸೂರು ವಿಶೇಷ ರೈಲು ಅ.21 ,22 ,23 ,24 ಮತ್ತು 25 ರಂದು ಮುಂಜಾನೆ 3 ಗಂಟೆಗೆ ಹೊರಟು ಅದೇ ದಿನ ಮುಂಜಾನೆ 6.15ಕ್ಕೆ ಮೈಸೂರು ತಲುಪಲಿದೆ ಎಂದು ನೈಋತ್ಯ ಇಲಾಖೆ ತಿಳಿಸಿದೆ.