Sunday, December 22, 2024

ಆಂಗ್ಲರಿಗೆ ಮುಖಭಂಗ : ಇಂಗ್ಲೆಂಡ್ ವಿರುದ್ಧ ಅಫ್ಘಾನಿಸ್ತಾನಕ್ಕೆ ಅಮೋಘ ಗೆಲುವು

ಬೆಂಗಳೂರು : ವಿಶ್ವಕಪ್-2023 ಟೂರ್ನಿಯ 13ನೇ ಪಂದ್ಯದಲ್ಲಿ ಅಫ್ಘಾನ್ ದಾಳಿಗೆ ಹಾಲಿ ಚಾಂಪಿಯನ್ಸ್ ಆಂಗ್ಲರು ಹೀನಾಯ ಸೋಲು ಕಂಡರು.

ನವದೆಹಲಿಯ ಅರುಣ್ ಜೇಟ್ಲಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಅಫ್ಘಾನಿಸ್ತಾ ತಂಡ ಇಂಗ್ಲೆಂಡ್ ವಿರುದ್ಧ 69 ರನ್​ಗಳ ಅಮೋಘ ಗೆಲುವು ಸಾಧಿಸಿತು. ಇದು ಅಫ್ಘಾನ್​ಗೆ ಈ ವಿಶ್ವಕಪ್​ ಟೂರ್ನಿಯಲ್ಲಿ ಮೊದಲ ಗೆಲುವಾದರೆ, ಇಂಗ್ಲೆಂಡ್​ಗೆ ಎರಡನೇ ಸೋಲಾಗಿದೆ.

ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡ 284 ರನ್​ ಗಳಿಸಿತು. 285 ರನ್​ಗಳ ಸವಾಲಿನ ಟಾರ್ಗೆಟ್ ಬೆನ್ನಟ್ಟಿದ ಇಂಗ್ಲೆಂಡ್ 40.3 ಓವರ್​ಗಳಲ್ಲಿ 215 ರನ್​ಗಳಿಗೆ ಸರ್ವಪತನ ಆಗುವ ಮೂಲಕ ಹೀನಾಯ ಸೋಲು ಅನುಭವಿಸಿದರು.

ಇಂಗ್ಲೆಂಡ್ ಪರ ಬ್ರೂಕ್ 66, ಮಲಾನ್ 32, ಆದಿಲ್ 12 ರನ್ ಗಳಿಸಿದರು. ಉಳಿದಂತೆ ಜೋ ರೂಟ್, ಲಿವಿಂಗ್​ಸ್ಟೋನ್, ಜಾನಿ ಬೈಸ್ಟೋ, ಜೋಸ್ ಬಟ್ಲರ್, ಸ್ಯಾಮ್ ಕರನ್ ಅಫ್ಘಾನ್ ತೂಫಾನ್ ಬೌಲಿಂಗ್​ಗೆ ಪೆವಿಲಿಯನ್ ಪೆರೇಡ್ ನಡೆಸಿದರು. ಅಫ್ಘಾನ್ ಪರ ರೆಹಮಾನ್ ಹಾಗೂ ರಶೀದ್ ಖಾನ್ 3, ನಬಿ 2, ನವೀನ್ ಹಾಗೂ ಫಾರುಕ್ ತಲಾ ಒಂದು ವಿಕೆಟ್ ಪಡೆದರು.

RELATED ARTICLES

Related Articles

TRENDING ARTICLES