Wednesday, January 22, 2025

ಅಡುಗೆ ಎಣ್ಣೆ ತುಂಬಿದ ಲಾರಿ ಪಲ್ಟಿ: ಎಣ್ಣೆಗೆ ಮುಗಿಬಿದ್ದ ಜನ!

ವಿಜಯಪುರ : ಚಾಲಕನ ನಿಯಂತ್ರಣ ತಪ್ಪಿ ಅಡುಗೆ ಎಣ್ಣೆ ತುಂಬಿದ ಲಾರಿ ಪಲ್ಟಿಯಾಗಿದ್ದು ಅಡುಗೆ ಎಣ್ಣೆಯನ್ನು ಬಿಂದಿಗೆಗಳಲ್ಲಿ ತುಂಬಿಕೊಳ್ಳಲು ಜನ ಮುಗಿಬಿದ್ದ ಘಟನೆ ವಿಜಯನಗರದ ಕೂಡ್ಲಿಗಿಯ ಬಣವಿಕಲ್ಲು ಗ್ರಾಮದ ಬಳಿ ನಡೆದಿದೆ.

ಗುಜರಾತ್​ ನೊಂದಾಯಿತ ಲಾರಿ ಅಡುಗೆ ಎಣ್ಣೆ ತುಂಬಿಕೊಂಡು ವಿಜಯನಗರದ ಕೂಡ್ಲಗಿ ಬಣವಿಕಲ್ಲು ಗ್ರಾಮದ ಬಳಿ ಬರುವಾಗ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಅಧೃಷ್ಟವಶಾತ್​ ಘಟನೆಯಲ್ಲಿ ಲಾರಿ ಚಾಲಕ ಹಾಗು ಕ್ಲೀನರ್​ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ: ರಾಮನಗರದಲ್ಲಿ ರೌಡಿ ಶೀಟರ್​ನ ಬರ್ಬರ ಹತ್ಯೆ!

ಇನ್ನೂ, ಲಾರಿ ಪಲ್ಟಿ ಆಗ್ತಿದಂತೆ ಅಲ್ಲೆ ಇದ್ದ ಸಾರ್ವಜನಿಕರು ಕೊಡಮ ಬಿಂದಿಗೆ ಕ್ಯಾನ್‌ಗಳಲ್ಲಿ ತುಂಬಿ ಅಡುಗೆ ಎಣ್ಣೆಯನ್ನ ಕೊಂಡೊಯ್ದಿದ್ದಾರೆ. ಘಟನಾ ಸ್ಥಳಕ್ಕೆ ಕಾನಾಹೊಸಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES