ಹುಬ್ಬಳ್ಳಿ: ಅನಧಿಕೃತವಾಗಿ ಸಂಗ್ರಹಿಸಿಟ್ಟಿದ್ದ ಪಟಾಕಿ ಗೊಡೌನ್ ಮೇಲೆ ದಾಳಿ ಮಾಡಿದ ಅಧಿಕಾರಿಗಳು ಸುಮಾರು 16 ಟನ್ ಪಟಾಕಿಯನ್ನ ಸೀಜ್ ಮಾಡಿ ವಶಕ್ಕೆ ಪಡೆದಿದ್ದಾರೆ.
ನಿನ್ನೆ ಹುಬ್ಬಳ್ಳಿಯ ಹೊರವಲಯದಲ್ಲಿರೋ ಶೆರೆವಾಡ ಬಳಿ ಇರೋ ಗೋಡೌನ್ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಸುಮಾರು 70 ಜನ ಅಧಿಕಾರಿಗಳಿಂದ ಆರ್.ಆರ್ ಹೆಬಸೂರು ಅವರಿಗೆ ಸೇರಿದ ಗೋಡೌನ್ ಮೇಲೆ ದಾಳಿ ಮಾಡಲಾಗಿತ್ತು. ಗೋಡೌನ್ ನಲ್ಲಿ ಬರೋಬ್ಬರಿ 72 ಟನ್ ಪಟಾಕಿ ಸಂಗ್ರಹ ಮಾಡಲಾಗಿತ್ತು. ಅಧಿಕಾರಿಗಳು ಇದರಲ್ಲಿ ಸುಮಾರು 16 ಟನ್ ಪಟಾಕಿಗೆ ಅಧಿಕೃತ CSIR ನಂಬರ್ ಇರದ ಕಾರಣಕ್ಕೆ ಸೀಜ್ ಮಾಡಿದ್ದಾರೆ.
ಇದನ್ನೂ ಓದಿ: ಅಡುಗೆ ಎಣ್ಣೆ ತುಂಬಿದ ಲಾರಿ ಪಲ್ಟಿ: ಎಣ್ಣೆಗೆ ಮುಗಿಬಿದ್ದ ಜನ!
ಲೈಸೆನ್ಸ್ ನಿಯಮ ಉಲ್ಲಂಘನೆ ಮಾಡಿದ ಆರೋಪದಡಿ ಗೋಡೌನ್ ಮೇಲೆ ಕಂದಾಯ ಇಲಾಖೆ,ಪೊಲೀಸ್ ಇಲಾಖೆ,ಅಗ್ನಿ ಶಾಮಕ ದಳ ,ವಾಯುಮಾಲಿನ್ಯ ಅಧಿಕಾರಿಗಳಿಂದ ದಾಳಿ ಮಾಡಲಾಗಿತ್ತು. 72 ಟನ್ ಪಟಾಕಿಯಲ್ಲಿ 16 ಟನ್ ಅನಧಿಕೃತವಾಗಿದೆ ಎಂದು ಸೀಜ್ ಮಾಡಿದ್ದಾರೆ. ಅನಧಿಕೃತ ಪಟಾಕಿ ಸಂಗ್ರಹಿಸಿದ ಹಿನ್ನಲೆ explosive act 1884ರ ಅಡೀ ಮಾಲೀಕರ ವಿರುದ್ದ ದೂರು ದಾಖಲಾಗಿದೆ.