ಬೆಂಗಳೂರು : ಹಿಟ್ ಮ್ಯಾನ್ ರೋಹಿತ್ ಶರ್ಮಾ ಹಾಗೂ ಶ್ರೇಯಸ್ ಅಯ್ಯರ್ ಬೊಂಬಾಟ್ ಅರ್ಧಶತಕ.. ಬೂಮ್ರಾ, ಸಿರಾಜ್, ಕುಲ್ದೀಪ, ಜಡೇಜಾ ಹಾಗೂ ಪಾಂಡ್ಯ ಬೆಂಕಿ ಬೌಲಿಂಗ್.. ಪಾಕ್ ಹುಟ್ಟಡಗಿಸಿದ ಭಾರತ.. ವಿಶ್ವಕಪ್ನಲ್ಲಿ ಭಾರತಕ್ಕೆ 8ನೇ ಗ್ರ್ಯಾಂಡ್ ವಿಕ್ಟರಿ.
ವಿಶ್ವಕಪ್-2023ರ ಟೂರ್ನಿಯ 12ನೇ ಪಂದ್ಯದಲ್ಲಿ ಬದ್ದವೈರಿ ಪಾಕಿಸ್ತಾನ ತಂಡದ ವಿರುದ್ಧ ಭಾರತ 7 ವಿಕೆಟ್ಗಳ ಅಮೋಘ ಗೆಲುವು ದಾಖಲಿಸಿತು. ಈ ಮೂಲಕ ನವರಾತ್ರಿ ಮುನ್ನಾ ದಿನ ದೇಶದ ಜನತೆಗೆ ಭಾರತ ಭರ್ಜರಿ ಗಿಫ್ಟ್ ನೀಡಿದೆ.
ಪಾಕಿಸ್ತಾನ ತಂಡ ನೀಡಿದ್ದ 192 ರನ್ಗಳ ಸಾಧಾರಣ ಟಾರ್ಗೆಟ್ ಬೆನ್ನಟ್ಟಿದ ಭಾರತ 30.3 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಭಾರತದ ಪರ ನಾಯಕ ರೋಹಿತ್ ಶರ್ಮಾ 86, ಶ್ರೇಯಸ್ ಅಯ್ಯರ್ ಅಜೇಯ 53*, ಕನ್ನಡಿಗೆ ಕೆ.ಎಲ್ ರಾಹುಲ್ ಅಜೇಯ 19*, ವಿರಾಟ್ ಕೊಹ್ಲಿ 16 ಹಾಗೂ ಶುಭಮನ್ ಗಿಲ್ 16 ರನ್ ಗಳಿಸಿದರು.
1992ರಿಂದ ಭಾರತಕ್ಕೆ ದಿಗ್ವಿಜಯ
ಪಾಕಿಸ್ತಾನ ಪರ ಶಾಹೀನ್ ಅಫ್ರಿದಿ ಎರಡು ಹಾಗೂ ಹಸನ್ ಅಲಿ ಒಂದು ವಿಕೆಟ್ ಪಡೆದರು. ಇನ್ನೂ ಪಾಕಿಸ್ತಾನದ ಪ್ರಮುಖ ಎರಡು ವಿಕೆಟ್ ಪಡೆದ ಬುಮ್ರಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. 1992ರಿಂದ 2023ರವರೆಗೆ ಏಕದಿನ ವಿಶ್ವಕಪ್ನಲ್ಲಿ ಪಾಕಿಸ್ತಾನ ವಿರುದ್ಧ ಆಡಿರುವ ಎಲ್ಲಾ 8 ಪಂದ್ಯಗಳಲ್ಲೂ ಭಾರತ ಅಮೋಘ ಗೆಲುವು ಸಾಧಿಸಿದೆ.