Wednesday, January 22, 2025

ಚಲಿಸುವ ಬೈಕ್‌ನಲ್ಲೇ ರೊಮ್ಯಾನ್ಸ್‌!

ಉತ್ತರ ಪ್ರದೇಶ : ಇತ್ತೀಚಿನ ದಿನಗಳಲ್ಲಿ ಚಲಿಸುವ ಬೈಕ್‌ನಲ್ಲೇ ಮುದ್ದಾಡುವ, ರೊಮಾನ್ಸ್‌ ಮಾಡುವ ಪ್ರೇಮಿಗಳಿಗೇನೂ ಕೊರತೆ ಇಲ್ಲ. ದೇಶದ ವಿವಿಧೆಡೆ ಇಂತಹ ಪ್ರಸಂಗ ನಡೆಯುತ್ತದೆ. ಅದಕ್ಕೆ ಪೊಲೀಸರು ದಂಡವನ್ನೂ ವಿಧಿಸುತ್ತಾರೆ. ಆದರೆ ಇಂತಹ ಪ್ರಕರಣ ನಿಯಂತ್ರಣಕ್ಕೆ ಮಾತ್ರ ಬಂದಿಲ್ಲ.

ಉತ್ತರ ಪ್ರದೇಶದ ಹಾಪುರದಲ್ಲಿ ಈ ಘಟನೆ ನಡೆದಿದೆ. ಯುವಕನೊಬ್ಬ ಬೈಕ್‌ ಓಡಿಸುತ್ತಿದ್ದ. ಆತನ ಪ್ರೇಯಸಿ ಆಚೆ-ಈಚೆ ಕಾಲು ಹಾಕಿ ಟ್ಯಾಂಕ್‌ ಮೇಲೆ ಆತನ ಎದುರಿಗೇ ಕುಳಿತಿದ್ದಳು. ಬೈಕ್‌ ಓಡಿಸುತ್ತ ಆತ ಆಕೆಯನ್ನು ಮುದ್ದು ಮಾಡುತ್ತಿದ್ದ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿತ್ತು.

ಇದನ್ನೂ ಓದಿ: ರೈತರಿಗೆ ಪ್ರತಿದಿನ 3 ಪಾಳಿಗಳಲ್ಲಿ ವಿದ್ಯುತ್: ಸಿಎಂ

ರಾಷ್ಟ್ರೀಯ ಹೆದ್ದಾರಿ 9ರಲ್ಲಿ ಈ ಲವ್‌ಸ್ಟೋರಿ ನಡೆದಿದ್ದು, ಸದ್ಯ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಮೋಟರ್‌ ವೆಹಿಕಲ್‌ ಆ್ಯಕ್ಟ್‌ ಪ್ರಕಾರ ಪೊಲೀಸರು ಯುವಕನಿಗೆ 8 ಸಾವಿರ ರೂ. ದಂಡ ವಿಧಿಸಿದ್ದಾರೆ. ಚಲಿಸುವ ಬೈಕ್‌ನಲ್ಲಿ ಜೋಡಿಯೊಂದು ಸಾಹಸ ಪ್ರದರ್ಶಿಸುವ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

RELATED ARTICLES

Related Articles

TRENDING ARTICLES