ಬೆಂಗಳೂರು : ವಿಶ್ವಕಪ್-2023 ಟೂರ್ನಿಯ 12ನೇ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಗೆಲುವು ಸಾಧಿಸುವುದರೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಭಾರಿ ಬದಲಾವಣೆಯಾಗಿದೆ.
ನ್ಯೂಜಿಲೆಂಡ್ ತಂಡವನ್ನು ಹಿಂದಿಕ್ಕಿ ಭಾರತ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಭಾರತ ತಂಡವು ಆಸ್ಟ್ರೇಲಿಯಾ, ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನ ವಿರುದ್ಧ ಹ್ಯಾಟ್ರಿಕ್ ಜಯ ಸಾಧಿಸಿ 6 ಅಂಕಗಳನ್ನು ಸಂಪಾದಿಸಿದೆ.
ಇನ್ನೂ ಸತತ ಮೂರು ಪಂದ್ಯ ಗೆದ್ದಿರುವ ನ್ಯೂಜಿಲೆಂಡ್ ಸಹ 6 ಅಂಕ ಪಡೆದಿದೆ. ಆದರೆ, ಉತ್ತಮ ರನ್ ರೇಟ್ (+1.821) ನಿಂದಾಗಿ ಭಾರತ ಅಗ್ರಸ್ಥಾನ ಅಲಂಕರಿಸಿದೆ. ನ್ಯೂಜಿಲೆಂಡ್ ತಂಡ ಎರಡನೇ ಸ್ಥಾನದಲ್ಲಿದ್ದರೆ ದಕ್ಷಿಣ ಆಫ್ರಿಕಾ 4 ಅಂಕಗಳೊಂದಿಗೆ ಮೂರನೇ ಸ್ಥಾನ ಹಾಗೂ ಪಾಕಿಸ್ತಾನ ನಾಲ್ಕನೇ ಸ್ಥಾನದಲ್ಲಿದೆ.
ಸತತ ಎಂಟು ಪಂದ್ಯಗಳಲ್ಲಿ ಜಯ
ಭಾರತ ತಂಡ ವಿಶ್ವಕಪ್ನಲ್ಲಿ ಪಾಕಿಸ್ತಾನ ವಿರುದ್ಧ 8 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.
- 1992 : ಭಾರತಕ್ಕೆ 43 ರನ್ಗಳ ಗೆಲುವು (ಸಿಡ್ನಿ)
- 1966 : ಭಾರತಕ್ಕೆ 39 ರನ್ಗಳ ಗೆಲುವು (ಬೆಂಗಳೂರು)
- 1999 : ಭಾರತಕ್ಕೆ 47 ರನ್ಗಳ ಗೆಲುವು (ಮ್ಯಾಂಚೆಸ್ಟರ್)
- 2003: ಭಾರತಕ್ಕೆ 6 ವಿಕಟ್ ಗೆಲುವು (ಸೆಂಚೂರಿಯನ್)
- 2011 : ಭಾರತಕ್ಕೆ 29 ರನ್ಗಳ ಗೆಲುವು (ಮೊಹಾಲಿ)
- 2015 : ಭಾರತಕ್ಕೆ 76 ರನ್ಗಳ ಗೆಲುವು (ಅಡಿಲೇಡ್)
- 2019 : ಭಾರತಕ್ಕೆ 89 ರನ್ಗಳ ಗೆಲುವು (ಮ್ಯಾಂಚೆಸ್ಟರ್)
- 2023 : ಭಾರತಕ್ಕೆ 7 ವಿಕೆಟ್ ಗೆಲುವು (ಅಹಮದಾಬಾದ್)