Thursday, January 23, 2025

ಪ್ರೊ.ಭಗವಾನ್ ಬಂಧನಕ್ಕೆ ಆಗ್ರಹ : ಶಾಸಕ ಅಶ್ವತ್ಥ್​ನಾರಾಯಣ

ಬೆಂಗಳೂರು: ಒಕ್ಕಲಿಗರು ಸಂಸ್ಕಾರ ಹೀನರು ಎಂಬ ವಿವಾದಿತ ಹೇಳಿಕೆ ನೀಡಿದ ಚಿಂತಕ ಪ್ರೊ.ಭಗವಾನ್​ ವಿರುದ್ಧ ಬಿಜೆಪಿ ಶಾಸಕ ಡಾ.ಅಶ್ವತ್ಥ್​​ ನಾರಾಯಣ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಲ್ಲಿ ಮಾತನಾಡಿದ ಅವರು, ಸರ್ಕಾರ ಈ ಭಗವಾನ್​​ನನ್ನ ಬಂಧಿಸಬೇಕು. ಸಮಾಜದಲ್ಲಿ ಗೊಂದಲ ಉಂಟು ಮಾಡ್ತಿದ್ದಾರೆ. ದುಷ್ಟರನ್ನ ಶಿಕ್ಷಿಸುವ ಚಾಮುಂಡಿಯನ್ನು ವಿರೋಧ ಮಾಡ್ತಾರೆ. ಆದರೆ ದುಷ್ಟರನ್ನು ರಕ್ಷಿಸುವ ಮಹಿಷನನ್ನು ಪೂಜಿಸ್ತಾರೆ. ಇವರು ಜನರ ಭಾವನೆಗಳನ್ನು ಕೆಣಕುತ್ತಿದ್ದಾರೆ.

ಇದನ್ನೂ ಓದಿ : ಒಕ್ಕಲಿಗರು ಸಂಸ್ಕೃತಿ ಹೀನರು ಎಂಬ ಹೇಳಿಕೆ ವಿವಾದ : ಸಮುದಾಯದವರಿಂದ ಪ್ರತಿಭಟನೆ

ಈ ಭಗವಾನ್ ಗೆ ಬುದ್ಧಿ ಏರುಪೇರಾಗಿದೆ‌‌. ಒಕ್ಕಲಿಗರು ಸುಸಂಸ್ಕೃತರು, ನಿನಗೆ ಶಕ್ತಿ, ತಾಕತ್ತು ಇದ್ರೆ ಕುವೆಂಪು ಹೆಸರು ಉಲ್ಲೇಖ ಮಾಡದೇ ನೀನು ಒಬ್ಬನೇ ಮಾತಾಡು ಎಂದು ಸವಾಲು ಹಾಕಿದರು.

RELATED ARTICLES

Related Articles

TRENDING ARTICLES