Thursday, January 23, 2025

ಒಕ್ಕಲಿಗರು ಸಂಸ್ಕೃತಿ ಹೀನರು ಎಂಬ ಹೇಳಿಕೆ ವಿವಾದ : ಸಮುದಾಯದವರಿಂದ ಪ್ರತಿಭಟನೆ

ಮೈಸೂರು : ಒಕ್ಕಲಿಗರು ಸಂಸ್ಕೃತಿ ಹೀನರು ಎಂಬ ಹೇಳಿಕೆ ನೀಡಿ ವಿವಾದಕ್ಕೀಡಾಗಿರುವ ಕೆ.ಎಸ್​ ಭಗವಾನ್​ ಅವರ ಮನೆಗೆ ಮುತ್ತಿಗೆ ಹಾಕಲು ಒಕ್ಕಲಿಗ ಸಮುದಾಯದ ಮುಖಂಡರು ಯತ್ನಸಿ ಪ್ರತಿಭಟನೆ ನಡೆಸಿದ್ದಾರೆ.

ಶುಕ್ರವಾರ ನಡೆದ ಮಹಿಷ ದಸರವನ್ನುದ್ದೇಶಿಸಿ ಕೆ.ಎಸ್​ ಭಗವಾನ್​ ಅವರು ಮಾತನಾಡುವ ವೇಳೆ ಒಕ್ಕಗಲಿಗರು ಸಂಸ್ಕೃತಿ ಹೀನರು ಎಂಬ ವಿವಾದಾತ್ಮಕ ಹೇಳಿಕಯೊಂದನ್ನು ನೀಡಿದ್ದಾರೆ. ಇದನ್ನು ವಿರೋಧಿಸಿದ ಒಕ್ಕಲಿಗರ ಸಮುದಾಯದವರಿಂದ ಭಗವಾನ್​ ಮನೆಗೆ ಮುತ್ತಿಗೆ ಯತ್ನ ನಡೆದಿದೆ.

ಇದನ್ನೂ ಓದಿ: ಚಲಿಸುವ ಬೈಕ್‌ನಲ್ಲೇ ರೊಮ್ಯಾನ್ಸ್‌! 

ಒಕ್ಕಲಿಗ ಸಮುದಾಯದ ಕುರಿತು ಅವಹೇಳನದ ಮಾತುಗಳನ್ನಾಡಿರುವ ಭಗವಾನ್​ ರನ್ನು ಗಡಿಪಾರು ಮಾಡುವಂತೆ ಇತ್ತಾಯಿಸಿ ನಗರದ ಕುವೆಂಪು ನಗರದಲ್ಲಿ ಪ್ರತಿಭಟಿಸಿದ್ದಾರೆ. ಈ ನಡುವೆ ಪೊಲೀಸರು – ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆದಿದ್ದು ಪ್ರತಿಭಟನಾಕಾರರು ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿ
ಜಾತಿ ನಡುವೆ ವಿಷಬೀಜ ಬಿತ್ತುವ ಭಗವಾನ್‌ಗೆ ಧಿಕ್ಕಾರ ಎಂಬ ಘೋಷಣೆಗಳನ್ನು ಕೂಗಿದ್ದಾರೆ.

ಈ ನಡುವೆ ಪ್ರತಿಭಟನಾ ನಿರತರನ್ನು ವಶಕ್ಕೆ ಪಡೆದ ಪೊಲೀಸರು ವ್ಯಾನ್‌ಗೆ ತುಂಬಿ ಕರೆದೊಯ್ಯುದ್ದಾರೆ.

RELATED ARTICLES

Related Articles

TRENDING ARTICLES